ಮೆಲ್ಬೋರ್ನ್: ಆಸ್ಟ್ರೇಲಿಯಾದ ವ್ಯಕ್ತಿಯೊಬ್ಬರು 112.4 ಡೆಸಿಬಲ್‌ಗಳ ಗಟ್ಟಿಯಾದ ಸ್ವರದಲ್ಲಿ ಶಬ್ದ ಮಾಡುವ ಮೂಲಕ ಗಿನ್ನಿಸ್ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ಉತ್ತರ ಭಾಗದಲ್ಲಿ ವಾಸಿಸುವ ನೆವಿಲ್ಲೆ ಶಾರ್ಪ್ ಎಂಬುವವರು ಈ ವಿನೂತನ ದಾಖಲೆ ಮಾಡಿದ್ದಾರೆ.
ಎಲೆಕ್ಟ್ರಿಕ್ ಡ್ರಿಲ್‌ಗಿಂತ ಜೋರಾಗಿ ಬರ್ಪ್ ಮಾಡುವ ಮೂಲಕ ನೆವಿಲ್ಲೆ ಈ ಸಾಧನೆ ಮಾಡಿದ್ದಾರೆ. ನೆವಿಲ್ಲೆ ಬಾಲ್ಯದಲ್ಲಿ ತನ್ನ ಅಕ್ಕನಿಂದ ಬರ್ಪ್ ಮಾಡಲು ಕಲಿತರಂತೆ. ಈಗ 45 ವರ್ಷವಾಗಿರುವ ನೆವಿಲ್ಲೆ ಅವರು ತಮ್ಮ ಬಾಲ್ಯದ ಕಲಿಕೆಯನ್ನು ವಿಶ್ವ ದಾಖಲೆಯನ್ನಾಗಿ ಮಾಡಿದ್ದಾರೆ.
ʼಸೂರ್ಯವಂಶಿʼಯ ಅಕ್ಷಯ್-ಕತ್ರಿನಾ ನೆನಪಿಸಿದ ಇಂಡೋನೇಷ್ಯಾ ಜೋಡಿಯ ಡಾನ್ಸ್
ವರದಿಗಳ ಪ್ರಕಾರ, ನೆವಿಲ್ಲೆ ಶಾರ್ಪ್ ಈಗ ಭೂಮಿಯ ಮೇಲೆ ಅತಿ ದೊಡ್ಡ ಧ್ವನಿಯಲ್ಲಿ ಶಬ್ಧ ಹೊರಡಿಸಿದ ವ್ಯಕ್ತಿಯಾಗಿದ್ದಾರೆ. ಅವರ ಬರ್ಪ್‌ನ ಧ್ವನಿಯು 112.4 ಡೆಸಿಬಲ್‌ಗಳಷ್ಟು ದಾಖಲಾಗಿದೆ. ಇದು ಎಲೆಕ್ಟ್ರಿಕ್ ಡ್ರಿಲ್‌ಗಿಂತ ಜೋರಾಗಿರುತ್ತದೆ ಅಥವಾ ಟ್ರಂಬೋನ್ ಅಥವಾ ಟ್ರಂಪೆಟ್‌ನ ಧ್ವನಿಗೆ ಹೋಲಿಸಬಹುದು.
ನೆವಿಲ್ಲೆ ಅವರ ಧ್ವನಿಯನ್ನು ನಿಖರವಾಗಿ ಅಳೆಯಲು ಸ್ಟುಡಿಯೊದಲ್ಲಿ ಅವರ ಬರ್ಪ್ ಧ್ವನಿ ಮಟ್ಟವನ್ನು ಪರೀಕ್ಷಿಸಲಾಯಿತು. ಅವನ ಬರ್ಪ್‌ನ ಧ್ವನಿಯನ್ನು ಸರಿಯಾದ ಸಾಧನದಿಂದ ಅಳೆದಾಗ, ಅದು ಹಿಂದಿನ ದಾಖಲೆಗಿಂತ 3 ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ.
ಇದಕ್ಕೂ ಮೊದಲು ಇಂಗ್ಲೆಂಡ್‌ನ ಪಾಲ್ ಹಾನ್ ಹೆಸರಿನಲ್ಲಿ ಅತಿ ವೇಗದ ಬರ್ಪ್ ದಾಖಲೆ ದಾಖಲಾಗಿತ್ತು. ಅವರು 109.9 ಡೆಸಿಬಲ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಇದಾದ 12 ವರ್ಷಗಳ ನಂತರ ನೆವಿಲ್ಲೆ ಅವರು 3 ಪಾಯಿಂಟ್‌ಗಳಿಂದ ಹಳೆ ದಾಖಲೆಯನ್ನು ಪುಡಿಗಟ್ಟಿದ್ದಾರೆ.