ಎಂದಿನಂತೆ ಸಮುದ್ರದಲ್ಲಿ ಮೀನುಗಾರಿಕೆಗೆ ಹೊರಟ ಆಸ್ಟ್ರೇಲಿಯಾದ ಬ್ರೆಟ್ ಹಾಗೂ ಆತನ ಸ್ನೇಹಿತರಿಗೆ ಅವರ ಹಣೆಬರಹದಲ್ಲಿ ಬೃಹತ್ ಗೋಲ್ಡ್ ಫಿಷ್ ಸಿಗಲಿದೆ ಎಂಬ ಕಲ್ಪನೆ ಕೂಡ ಇರಲಿಲ್ಲ. ಕ್ವೀನ್ಸ್ ಲ್ಯಾಂಡ್‍ನ ಹಾರ್ವೆ ಬೇನಲ್ಲಿ ಅವರ ಬಲೆಗೆ ಬೃಹತ್ ಮೀನು ಕೇವಲ 400 ಮೀ. ಸಾಗರದ ಆಳದಲ್ಲಿ ಸಿಕ್ಕಿ ಹಾಕಿಕೊಂಡಿತು.
ಆಕರ್ಷಕ ಮುಖ ಪಡೆಯಲು ʼಫೇಸ್ ಯೋಗʼ ಹೇಳಿಕೊಟ್ಟ ಮಲೈಕಾ
ಅದನ್ನು ಎಳೆದು ನೋಡಿದಾಗಲೇ ತಿಳಿದಿದ್ದು, ಅವರ ದಿನವೂ ಬಹಳ ವಿಶೇಷವಾಗಿದೆ ಎಂದು. ಅವರಿಗೆ ಸಿಕ್ಕಿದ್ದು ಬರೋಬ್ಬರಿ 10 ಕೆ.ಜಿ ತೂಕದ ದೈತ್ಯ ಗೋಲ್ಡ್ ಫಿಷ್. ಈ ಅಪರೂಪದ ಮೀನಿನ ಗುರುತಿನ ಬಗ್ಗೆ ತಿಳಿಯಲು ಅವರು ಮೀನಿನ ಫೋಟೊವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು.
ಕೆಲವು ಅನುಭವಿ ಮೀನುಗಾರರು ಇದನ್ನು ‘ಜಪಾನೀಸ್ ರೂಬಿಫಿಷ್’ ಎಂದು ಗುರುತಿಸಿದ್ದಾರೆ. ಸಾಗರದ 300 ಮೀ. ಆಳದಲ್ಲಿ ವಾಸಿಸುವ ಈ ಅಪರೂಪದ ಮೀನುಗಳು, ಜಪಾನ್, ಕೊರಿಯಾ, ದಕ್ಷಿಣ ಆಫ್ರಿಕಾದಲ್ಲಿ ಕಾಣಸಿಗುತ್ತವೆಯಂತೆ.