ಈ ಇಲಿಗಳು ಮನೆಯನ್ನ ಸೇರಿಕೊಂಡವು ಅಂದರೆ ಸಾಕು. ಏನಾದರೊಂದು ಕಿತಾಪತಿ ಮಾಡುತ್ತವೆ. ಅದೇ ರೀತಿಯ ಪ್ರಕರಣ ಒಂದರಲ್ಲಿ ನ್ಯೂ ಸೌತ್ ವೇಲ್ಸ್ನ ಮಹಿಳೆಯೊಬ್ಬರು ಇಲಿ ಮಾಡಿದ ಅವಘಡದಿಂದಾಗಿ ಆಸ್ಪತ್ರೆಗೆ ದಾಖಲಾಗುವಂತಾಗಿದೆ.
ತಾನು ಮಲಗಿದ್ದ ವೇಳೆ ಇಲಿಯು ತನ್ನ ಕಣ್ಣುಗುಡ್ಡೆಯನ್ನ ತಿಂದ ಅನುಭವವಾದ ಹಿನ್ನೆಲೆಯಲ್ಲಿ ಮಹಿಳೆಯು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲಿಯು ಕಚ್ಚಿದ ಅನುಭವವಾದ ಹಿನ್ನೆಲೆಯಲ್ಲಿ ಮಹಿಳೆ ಎದ್ದು ನೋಡಿದಾಗ ಈ ಗಂಭೀರ ವಿಚಾರ ಬೆಳಕಿಗೆ ಬಂದಿದೆ.
ರೈತನ ಪತ್ನಿಯಾಗಿದ್ದ ಮಹಿಳೆ ಇದೀಗ ಆಸ್ಪತ್ರೆ ಪಾಲಾಗಿದ್ದಾಳೆ. ಕಳೆದ ಮೂವತ್ತು ವರ್ಷಗಳಲ್ಲಿ ಇಲಿಯಿಂದ ಆದ ಅತ್ಯಂತ ಭಯಾನಕ ಪ್ರಕರಣ ಇದು ಎಂದು ವರದಿಯಾಗಿದೆ. ಈ ವಿಚಾರವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.