alex Certify BIG NEWS: ಖಲಿಸ್ತಾನಿ ಪರ ವಾದಿಗಳಿಂದ ಆಸ್ಟ್ರೇಲಿಯಾದ ಮತ್ತೊಂದು ಹಿಂದೂ ದೇಗುಲಕ್ಕೆ ಹಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಖಲಿಸ್ತಾನಿ ಪರ ವಾದಿಗಳಿಂದ ಆಸ್ಟ್ರೇಲಿಯಾದ ಮತ್ತೊಂದು ಹಿಂದೂ ದೇಗುಲಕ್ಕೆ ಹಾನಿ

ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಪರ ವಾದಿಗಳು ಹಿಂದೂ ದೇಗುಲಗಳ ಮೇಲಿನ ದಾಳಿಯನ್ನು ಮುಂದುವರಿಸಿದ್ದು, ಬ್ರಿಸ್ಬೇನ್ ನಲ್ಲಿರುವ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯದ ಗೋಡೆಯನ್ನು ವಿರೂಪಗೊಳಿಸಲಾಗಿದೆ.

ಈ ಮೊದಲೂ ಸಹ ಸ್ವಾಮಿ ನಾರಾಯಣ ಮಂದಿರದ ಮೇಲೆ ದಾಳಿ ನಡೆಸಲಾಗಿದ್ದು, ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದೂ ವಿರೋಧಿ ಘೋಷಣೆಗಳನ್ನು ಬರೆಯಲಾಗಿತ್ತು.

ಇದೀಗ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯಕ್ಕೆ ಹಾನಿ ಮಾಡಲಾಗಿದ್ದು, ಈ ಕುರಿತಂತೆ ಮಾತನಾಡಿರುವ ಹಿಂದೂಗಳ ಹಕ್ಕು ರಕ್ಷಣಾ ಹೋರಾಟದ ನಿರ್ದೇಶಕಿ ಸಾರಾ ಗೇಟ್ಸ್, ಆಸ್ಟ್ರೇಲಿಯಾದಲ್ಲಿರುವ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಕೃತ್ಯ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...