alex Certify ಸಾಫ್ಟ್‌ಬಾಲ್ ಪಂದ್ಯದ ವೇಳೆ ಗೆಳತಿಗೆ ಪ್ರಪೋಸ್ ಮಾಡಿದ ಮಹಿಳಾ ಆಟಗಾರ್ತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಫ್ಟ್‌ಬಾಲ್ ಪಂದ್ಯದ ವೇಳೆ ಗೆಳತಿಗೆ ಪ್ರಪೋಸ್ ಮಾಡಿದ ಮಹಿಳಾ ಆಟಗಾರ್ತಿ…!

ಪರ್ತ್: ಇತ್ತೀಚೆಗಷ್ಟೇ ಆಸೀಸ್-ಇಂಗ್ಲೆಂಡ್ ಕ್ರಿಕೆಟ್ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿ, ಆಸ್ಟ್ರೇಲಿಯಾದ ಅಭಿಮಾನಿಗೆ ಇಂಗ್ಲೆಂಡ್ ವ್ಯಕ್ತಿ ಪ್ರಪೋಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಸಾಫ್ಟ್‌ಬಾಲ್ ಪಂದ್ಯದ ವೇಳೆ ಆಸೀಸ್ ಆಟಗಾರ್ತಿ ತನ್ನ ಗೆಳತಿಗೆ ಪ್ರಪೋಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಆಸ್ಟ್ರೇಲಿಯನ್ ಸಾಫ್ಟ್‌ಬಾಲ್ ಆಟಗಾರ್ತಿಯೊಬ್ಬಳು ತನ್ನ ಗೆಳತಿಗೆ ಪಿಚ್‌ನಲ್ಲಿ ಮದುವೆಯಾಗುವಂತೆ ಪ್ರಪೋಸ್ ಮಾಡಿದ್ದು, ಆಕೆ ಕೂಡ ಒಪ್ಪಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆದ ನಂತರ ನೆಟ್ಟಿಗರಿಂದ ಭಾವನಾತ್ಮಕ ಪ್ರತಿಕ್ರಿಯೆ ಪಡೆದಿದೆ.

ಆಸ್ಟ್ರೇಲಿಯಾದ ಪರ್ತ್‌ನ ಮಿರ್ರಾಬುಕಾ ಸಾಫ್ಟ್‌ಬಾಲ್ ಕಾಂಪ್ಲೆಕ್ಸ್‌ನಲ್ಲಿ ಸಾಫ್ಟ್‌ಬಾಲ್ ಲೀಗ್ ಪಂದ್ಯದ ವೇಳೆ ಸಾರಾ ರಿಯೊ ಗಾಯಗೊಂಡಂತೆ ವರ್ತಿಸಿದ್ದಾಳೆ. ಕೂಡಲೇ ಆಕೆ ಬಾಲ್ ತಾಗಿ ನೆಲಕ್ಕೆ ಬಿದ್ದು ಒದ್ದಾಡಿದ್ದಾಳೆ. ಇದರಿಂದ ಆಕೆಯ ಗೆಳತಿ ಕಮಾಂಡೆ ಏನಾಯಿತು ಎಂಬ ಗಾಬರಿಯೊಂದಿಗೆ ಮೈದಾನದತ್ತ ಓಡಿದ್ದಾಳೆ.

ಗೆಳತಿ  ಕಮಾಂಡೆ ಹತ್ತಿರ ಬರುತ್ತಿದ್ದಂತೆ ತನ್ನ ಮೊಣಕಾಲಿನ ಮೇಲೆ ಕುಳಿತ ರಿಯೋ ಪ್ರೇಮ ನಿವೇದನೆ ಮಾಡಿದ್ದಾಳೆ. ಇದರಿಂದ ಆಶ್ಚರ್ಯ ಹಾಗೂ ಸಂತೋಷಗೊಂಡ ಕಮಾಂಡೆ ಕೂಡಲೇ ಆಕೆಯ ನಿವೇದನೆಯನ್ನು ಒಪ್ಪಿದ್ದು, ಇಬ್ಬರೂ ಅಪ್ಪಿಕೊಂಡು ಮುದ್ದಾಡಿದ್ದಾರೆ. ಈ ವೇಳೆ ನೆರೆದಿದ್ದ ಆಟಗಾರರು ಜೋಡಿಗೆ ಚಪ್ಪಾಳೆ ತಟ್ಟಿ ಶುಭಹಾರೈಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...