alex Certify 0001 ಸಂಖ್ಯೆಗೆ 6.75 ಲಕ್ಷ ರೂ.: ಆಕರ್ಷಕ ನೋಂದಣಿ ಸಂಖ್ಯೆ ಹರಾಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

0001 ಸಂಖ್ಯೆಗೆ 6.75 ಲಕ್ಷ ರೂ.: ಆಕರ್ಷಕ ನೋಂದಣಿ ಸಂಖ್ಯೆ ಹರಾಜು

ಬೆಂಗಳೂರು: ಸಾರಿಗೆ ಇಲಾಖೆ ವತಿಯಿಂದ ಬೆಂಗಳೂರಿನ ಯಶವಂತಪುರ ಪ್ರಾದೇಶಿಕ ಕಚೇರಿಯಲ್ಲಿ ಆಗಸ್ಟ್ 31 ರಂದು ನಡೆದ KA-04/ND ಮುಂಗಡ ನೋಂದಣಿ ಶ್ರೇಣಿ ಪ್ರಾರಂಭಿಸಲು ಆಕರ್ಷಕ ನೋಂದಣಿ ಸಂಖ್ಯೆಗಳ ಸಾರ್ವಜನಿಕ ಬಹಿರಂಗ ಹರಾಜಿನಲ್ಲಿ  ಒಟ್ಟು 21,55,000 ರೂ. ರಾಜಸ್ವ ಸಂಗ್ರಹಿಸಲಾಗಿದೆ.

ಈ ಬಹಿರಂಗ ಹರಾಜಿನಲ್ಲಿ 13 ನೋಂದಣಿ ಸಂಖ್ಯೆಗಳನ್ನು ಹರಾಜು ಮಾಡಲಾಗಿದೆ. ಪ್ರತಿ ನೋಂದಣಿ ಸಂಖ್ಯೆಗೆ ಅರ್ಜಿ ಶುಲ್ಕ 75,000 ರೂ. ಸೇರಿದಂತೆ KA -04/ND– 0001 ಸಂಖ್ಯೆಗೆ 6,75,000 ರೂ. ಗೆ ಹರಾಜಾಗಿದೆ.

KA -04/ND –9999 ಸಂಖ್ಯೆಗೆ 3,00,000 ರೂ.,  KA -04/ND–0005 ಸಂಖ್ಯೆಗೆ 1,90,000 ರೂ., KA-04/ND–0009 ಸಂಖ್ಯೆಗೆ 1,35,000 ರೂ., KA04/ND/1234 ಸಂಖ್ಯೆಗೆ 1,05,000 ರೂ., KA-04/ND–1111 ಸಂಖ್ಯೆಗೆ 95,500 ರೂ., KA04/ND/0006 ಸಂಖ್ಯೆಗೆ 1,00,000 ರೂ., KA04/ND/6666 ಸಂಖ್ಯೆಗೆ 1,00,000 ರೂ., KA04/ND/0007 ಸಂಖ್ಯೆಗೆ  1,05,000 ರೂ., KA04/ND/8888 ಸಂಖ್ಯೆಗೆ 1,00,000 ರೂ., KA04/ND/4888 ಸಂಖ್ಯೆಗೆ 85,000 ರೂ., KA04/ND/4599 ಸಂಖ್ಯೆಗೆ 85,000 ರೂ.ಮತ್ತು KA04/ND/0777 ಸಂಖ್ಯೆಗೆ 80,000 ರೂ. ಗಳ ಬಿಡ್ ಮೊತ್ತಕ್ಕೆ ಹರಾಜು ಮಾಡಲಾಗಿದೆ ಎಂದು ಸಾರಿಗೆ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...