ಬೆಂಗಳೂರು : ಲೋಡ್ ಟೆಸ್ಟಿಂಗ್ ಕಾರ್ಯ ನಡೆಯುವ ಹಿನ್ನೆಲೆ ಜ.16 ರಿಂದ 4 ದಿನ ‘ಪೀಣ್ಯ ಫ್ಲೈ ಓವರ್’ ಬಂದ್ ಆಗಲಿದೆ.
ಜ.16 ರ ರಾತ್ರಿ 11 ಗಂಟೆಯಿಂದ ಜ.19 ರ ಬೆಳಗ್ಗೆ 11 ಗಂಟೆವರೆಗೆ ಪೀಣ್ಯ ಫ್ಲೈ ಓವರ್ ಬಂದ್ ಆಗಲಿದ್ದು, ಸರ್ವೀಸ್ ರಸ್ತೆ ಬಳಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ಲೋಡ್ ಟೆಸ್ಟಿಂಗ್ ನಡೆಯುವ ಹಿನ್ನೆಲೆ ಮತ್ತೆ 4 ದಿನ ‘ಪೀಣ್ಯ ಫ್ಲೈ ಓವರ್’ ಬಂದ್ ಆಗಲಿದ್ದು, ವಾಹನ ಸವಾರರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.