alex Certify World Tourism Day : ಹೋಟೆಲ್ ಮಾಲೀಕರ ಗಮನಕ್ಕೆ : ಪರಿಸರಸ್ನೇಹಿ ಚಟುವಟಿಕೆ ಕೈಗೊಳ್ಳಲು ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

World Tourism Day : ಹೋಟೆಲ್ ಮಾಲೀಕರ ಗಮನಕ್ಕೆ : ಪರಿಸರಸ್ನೇಹಿ ಚಟುವಟಿಕೆ ಕೈಗೊಳ್ಳಲು ಸೂಚನೆ

ಶಿವಮೊಗ್ಗ : ದಿ: 27-09-2023 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ‘ಟೂರಿಸಂ & ಗ್ರೀನ್ ಇನ್ವೆಸ್ಟ್‍ಮೆಂಟ್ಸ್’ ಸಂದೇಶದಡಿಯಲ್ಲಿ ಆಚರಿಸಲಾಗುತ್ತಿದ್ದು ಜಿಲ್ಲೆಯ ಎಲ್ಲ ಹೋಟೆಲ್, ರೆಸಾರ್ಟ್ ಮತ್ತು ಹೋಂ ಸ್ಟೇಗಳಲ್ಲಿ ಪರಿಸರಸ್ನೇಹಿ ಚಟುವಟಿಕೆಗಳನ್ನು ಪ್ರಸ್ತುತಿಪಡಿಸಲು ಸಾಮಾನ್ಯ ಸಲಹೆಗಳನ್ನು ಪಾಲಿಸುವಂತೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹೋಟೆಲ್, ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಸ್ವಚ್ಚತೆ, ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ನೈರ್ಮಲ್ಯ ಶುಚಿತ್ವದ ಬಗ್ಗೆ ಅರಿವು ಮೂಡಿಸುವುದು ಸೇರಿದಂತೆ ಇನ್ನಿತರೆ ಪರಿಸರಸ್ನೇಹಿ ಚಟುವಟಿಕೆಗಳನ್ನು ಪ್ರಸ್ತುತಿಪಡಿಸಲು ಕೆಳಕಂಡ ಸಲಹೆಗಳನ್ನು ನೀಡಲಾಗಿದೆ.

• ರಾಜ್ಯಾದ್ಯಂತ ಎಲ್ಲ ಹೋಟೆಲ್‍ಗಳು/ರೆಸ್ಟೋರೆಂಟ್‍ಗಳಲ್ಲಿ ಈ ಬಾರಿಯ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಥೀಮ್‍ನ್ನು ಪರಿಸರಸ್ನೇಹಿ ಬಟ್ಟೆ ಬ್ಯಾನರ್‍ನಲ್ಲಿ ಮುದ್ರಿಸಿ ಪ್ರದರ್ಶಿಸುವುದು.
• ರಾಜ್ಯಾದ್ಯಂತ ಎಲ್ಲಾ ಹೋಟೆಲ್‍ಗಳು/ರೆಸ್ಟೋರೆಂಟ್‍ಗಳಲ್ಲಿ ಸಾಂಪ್ರದಾಯಿಕ ಖಾದ್ಯಗಳನ್ನು ನೀಡುವುದು.
• ಪ್ರವಾಸಿ ತಾಣಗಳ ಕುರಿತ ವಿಡಿಯೋಗಳನ್ನು ಎಲ್ಲಾ ಹೋಟೆಲ್‍ಗಳು/ಕಚೇರಿಗಳಲ್ಲಿ ಪ್ರದರ್ಶಿಸುವುದು.
• ಸ್ವಚ್ಚತಾ ಅಭಿಯಾನಗಳನ್ನು ಕೈಗೊಳ್ಳುವುದು ಹಾಗೂ ಸಸಿಗಳನ್ನು ನೆಡುವುದು.
• ರಾಜ್ಯಾದ್ಯಂತ ಎಲ್ಲಾ ಹೋಟೆಲ್‍ಗಳು/ರೆಸ್ಟೋರೆಂಟ್‍ಗಳಲ್ಲಿ ವಿದ್ಯುತ್ ದೀಪಾಲಂಕಾರವನ್ನು ಕೈಗೊಳ್ಳುವುದು.
• ಎಲ್ಲಾ ಹೋಟೆಲ್/ರೆಸ್ಟೋರೆಂಟ್ ಕೊಠಡಿಗಳ ದರಗಳಲ್ಲಿ ವಿಶೇಷ ರಿಯಾಯಿತಿಯನ್ನು ನೀಡುವುದು.
• ಎಲ್ಲಾ ಹೋಟೆಲ್‍ಗಳಲ್ಲಿ ಛಾಯಾಚಿತ್ರಗಳನ್ನೊಂಡ ಸೆಲ್ಫಿ ಪಾಯಿಂಟ್‍ಗಳನ್ನು ಅಳವಡಿಸುವುದು.
• ಹೋಟೆಲ್‍ಗಳು/ರೆಸ್ಟೋರೆಂಟ್‍ಗಳಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಕೈಗೊಳ್ಳುವುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...