ಎಟಿಎಂಗಳಲ್ಲಿನ ಹಣ ದೋಚಲು ದುಷ್ಕರ್ಮಿಗಳು ಮುಂದಾಗುತ್ತಿರುವುದು ದಿನೇದಿನೆ ಹೆಚ್ಚುತ್ತಿದೆ. ಇಂಥದ್ದೇ ಒಂದು ಕೃತ್ಯವು ಗುರ್ಗಾಂವ್ನ ಧನಕೋಟ್ ಪ್ರದೇಶದಲ್ಲಿ ವರದಿಯಾಗಿದೆ. ಆದರೆ, ಈ ಬಾರಿ ಕಳ್ಳರು ಎಟಿಎಂ ದೋಚುತ್ತಿದ್ದಾಗ ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ತಡೆದು ಬಂಧಿಸಲು ಯತ್ನಿಸಿದ್ದಾರೆ. ನಸುಕಿನ 2 ಗಂಟೆಗೆ ಘಟನೆ ಜರುಗಿದೆ.
ಇದಕ್ಕೆ ಹೆದರದೆಯೇ ಕಳ್ಳರು, ಪೊಲೀಸರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಪಿಸ್ತೂಲ್ ಹೊಂದಿರುವ ಕಳ್ಳರ ಹೆಡೆಮುರಿ ಕಟ್ಟಲು ಪೊಲೀಸರು ಮುಂದಾಗಿದ್ದಾರೆ. ಆದರೆ ಕಾರಿನಲ್ಲಿ ಕಳ್ಳರು ಪರಾರಿಯಾಗಲು ಯತ್ನಿಸಿದಾಗ, ಪೊಲೀಸರು ಚೇಸ್ ಆರಂಭಿಸಿದ್ದಾರೆ.
ಐವರ ಸಾವು ಪ್ರಕರಣಕ್ಕೆ ಹೊಸ ತಿರುವು: ಡೆತ್ ನೋಟ್ ನಲ್ಲಿ ಅಕ್ರಮ ಸಂಬಂಧ ಸೇರಿ ಸ್ಪೋಟಕ ರಹಸ್ಯ ಬಯಲು…?
ಸುಮಾರು ಆರು ಕಿಲೋಮೀಟರ್ವರೆಗೆ ಚೇಸ್ ನಡೆದಿದೆ. ಮುಂಚಿತವಾಗಿಯೇ ಸಿಕ್ಕ ಎಚ್ಚರಿಕೆ ಸಂದೇಶ ಆಧರಿಸಿ, ರಸ್ತೆ ಮಾರ್ಗದಲ್ಲಿ ಪೊಲೀಸರು ವಾಹನವೊಂದನ್ನು ಅಡ್ಡಲಾಗಿ ನಿಲ್ಲಿಸಲಾಗಿತ್ತು. ಆದರೆ ಕಳ್ಳರು ಕಾರಿನಿಂದ ರಸ್ತೆ ತಡೆಯನ್ನೇ ಗುದ್ದಿಕೊಂಡು ಪರಾರಿಯಾಗಿದ್ದಾರೆ. ಸಿನಿಮಾಗಳಲ್ಲಿ ನಡೆಯುವ ದೃಶ್ಯದಂತೆ ಈ ಚೇಸಿಂಗ್ ನಡೆದಿದೆ. ಎಟಿಎಂನಿಂದ ದೋಚಲಾಗಿರುವ ಮೊತ್ತ ಎಷ್ಟು ಎಂದು ಬ್ಯಾಂಕಿನ ಸಿಬ್ಬಂದಿ ಇನ್ನೂ ಕೂಡ ತಿಳಿಸಿಲ್ಲ.