
ಟೀಂ ಇಂಡಿಯಾ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ಕೈ ಹಿಡಿದ ನಟ ಸುನಿಲ್ ಶೆಟ್ಟಿ ಪುತ್ರಿ ಆಥಿಯಾ ಶೆಟ್ಟಿ ತಮ್ಮ ಮದುವೆಯಲ್ಲಿ ಧರಿಸಿದ್ದ ಲೆಹಂಗಾ ಗಮನ ಸೆಳೆದಿದ್ದು ಅದನ್ನು ತಯಾರಿಸಲು ಎಷ್ಟು ದಿನ ಬೇಕಾಯ್ತು ಗೊತ್ತಾ? ಈ ಬಗ್ಗೆ ನೀವು ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡ್ತೀರಾ. ವಿನ್ಯಾಸಕರ ಪ್ರಕಾರ ಲೆಹಂಗಾವನ್ನ ತಯಾರಿಸಲು 10,000 ಗಂಟೆ ಸಮಯ ತೆಗೆದುಕೊಳ್ಳಲಾಗಿದೆ.
ಅಂದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ಬೇಕಾಗಿದೆ. ಮದುವೆಯ ವಿಶೇಷ ದಿನಕ್ಕಾಗಿ ವಧು ಆಥಿಯಾ ಶೆಟ್ಟಿ ಧರಿಸಿದ್ದ ಲೆಹಂಗಾವನ್ನ ಡಿಸೈನರ್ ಅನಾಮಿಕಾ ಖನ್ನಾ ತಯಾರಿಸಿದ್ದು ಗುಲಾಬಿ ಬಣ್ಣದ ಚಿಕಂಕರಿ ಲೆಹೆಂಗಾವನ್ನು ಧರಿಸಿದ್ದ ವಧು ಆಥಿಯಾ ಕಂಗೊಳಿಸ್ತಿದ್ರು.
ನಟ ಆಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮ ತಂದೆ ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್‌ಹೌಸ್‌ನಲ್ಲಿ ಸೋಮವಾರ ವಿವಾಹವಾದರು.

