alex Certify ಬಂಧನಕ್ಕೆ ಕಾರಣವಾಯ್ತು ಮಗನ ಶಾಲೆ ʼವಾಟ್ಸಾಪ್ ಗ್ರೂಪ್ʼ ಗೆ ಈತ ಕಳುಹಿಸಿದ ಸಂದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಂಧನಕ್ಕೆ ಕಾರಣವಾಯ್ತು ಮಗನ ಶಾಲೆ ʼವಾಟ್ಸಾಪ್ ಗ್ರೂಪ್ʼ ಗೆ ಈತ ಕಳುಹಿಸಿದ ಸಂದೇಶ

Father Sends Obscene Images and videos in sons schools Whatsapp group tamil  nadu chennai | बेटे के स्कूल के WhatsApp ग्रुप में पिता ने ऐसा क्या कर दिया  जो हो गया गिरफ्तार? |ತಮಿಳುನಾಡಿನ ಚೆನ್ನೈನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 44 ವರ್ಷದ ವ್ಯಕ್ತಿಯೊಬ್ಬ ಮಗನ ಶಾಲೆಯ ವಾಟ್ಸಾಪ್ ಗುಂಪಿಗೆ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಈ ಘಟನೆ ಚೆನ್ನೈನ ಆವಡಿಯಲ್ಲಿ ನಡೆದಿದೆ. ಆಕ್ಷೇಪಾರ್ಹ ಫೋಟೋಗಳು ಮತ್ತು ವೀಡಿಯೋಗಳನ್ನು ಶಾಲೆಯ ವಾಟ್ಸಾಪ್ ಗ್ರೂಪ್‌ಗೆ ಕಳುಹಿಸಿದ ನಂತರ, ಮುಖ್ಯ ಶಿಕ್ಷಕರು ಆರೋಪಿ  ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಆರೋಪಿಯ ಮಗ 6 ನೇ ತರಗತಿಯಲ್ಲಿ ಓದುತ್ತಿದ್ದಾನೆ ಎನ್ನಲಾಗಿದೆ.

ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಆತನ ತಪ್ಪು ಸಾಬೀತಾದಲ್ಲಿ ಕಠಿಣ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. ಇಂಥಹ ತಪ್ಪುಗಳನ್ನು ಕ್ಷಮಿಸಲಾಗುವುದಿಲ್ಲವೆಂದು ಮುಖ್ಯೋಪಾದ್ಯಾಯರು ಹೇಳಿದ್ದಾರೆ.

ತಪ್ಪಾಗಿ ಫೋಟೋಗಳು ಮತ್ತು ವೀಡಿಯೊಗಳು ಮಗನ ಶಾಲೆಯ ವಾಟ್ಸಾಪ್ ಗುಂಪಿಗೆ ಹೋಗಿವೆ ಎಂದು ಆರೋಪಿ ಹೇಳಿದ್ದಾನೆ. ಗುಂಪಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸುವುದರ ಹಿಂದೆ ಯಾವುದೇ ಉದ್ದೇಶವಿರಲಿಲ್ಲವೆಂದು ಆತ ಹೇಳಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...