ನಿವೃತ್ತಿ ನಂತ್ರ ಬದುಕು ಆರ್ಥಿಕವಾಗಿ ಸುರಕ್ಷಿತವಾಗಿರಬೇಕೆಂದು ಎಲ್ಲರೂ ಬಯಸ್ತಾರೆ. ನಿವೃತ್ತಿಯಲ್ಲಿ ಆರಾಮದ, ಶಾಂತಿಯುತ ಜೀವನ ಬಯಸುವವರಿಗೆ ಸರ್ಕಾರ ನೆರವಾಗ್ತಿದೆ. ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ, ನಿವೃತ್ತಿಯನ್ನು ಸುರಕ್ಷಿತಗೊಳಿಸಬಹುದಾಗಿದೆ.
ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು 10 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು. ಇದ್ರಲ್ಲಿ ಹೂಡಿಕೆ ಮಾಡುವ ಬಗ್ಗೆ ಮಹತ್ವದ ಮಾಹಿತಿ ಇಲ್ಲಿದೆ.
ಅಟಲ್ ಪಿಂಚಣಿ ಯೋಜನೆ ಎಂದರೇನು ಎಂಬುದನ್ನು ಮೊದಲು ತಿಳಿಯೋಣ. ವೃದ್ಧಾಪ್ಯವನ್ನು ಸುರಕ್ಷಿತಗೊಳಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ, ಮಾಸಿಕ 10 ಸಾವಿರ ರೂಪಾಯಿ ಪಿಂಚಣಿ ಬಯಸಿದರೆ, ಗಂಡ ಮತ್ತು ಹೆಂಡತಿ ಇಬ್ಬರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಗಂಡನ ವಯಸ್ಸು 30 ವರ್ಷವಾಗಿದ್ದರೆ, 5000 ರೂಪಾಯಿ ಪಿಂಚಣಿ ಪಡೆಯಲು ಪ್ರತಿ ತಿಂಗಳು 577 ರೂಪಾಯಿ ಹೂಡಿಕೆ ಮಾಡಬೇಕು. ಹೆಂಡತಿಗೆ 25 ವರ್ಷವಾಗಿದ್ದರೆ, ಆಕೆ ಪ್ರತಿ ತಿಂಗಳು 376 ರೂಪಾಯಿ ಹೂಡಿಕೆ ಮಾಡಬೇಕು.
‘ಜೀವನದೊಂದಿಗೆ ಜೀವವೂ ಮುಖ್ಯ…’; ಎಲ್ಲರನ್ನು ಆಕರ್ಷಿಸಿದ ಸಿಎಂ ದಸರಾ ಸಂದೇಶ
ಗಂಡ ಮತ್ತು ಹೆಂಡತಿಯಲ್ಲಿ ಒಬ್ಬರು ಸತ್ತರೆ, ಅಂತಹ ಪರಿಸ್ಥಿತಿಯಲ್ಲಿ ಉಳಿದಿರುವ ಪಾಲುದಾರರಿಗೆ ಈ ಯೋಜನೆಯಡಿ 8.5 ಲಕ್ಷ ರೂಪಾಯಿ ನೀಡಲಾಗುತ್ತದೆ. ಪ್ರತಿ ತಿಂಗಳು ಪಿಂಚಣಿ ಕೂಡ ಸಿಗಲಿದೆ.
ಉಳಿತಾಯ ಖಾತೆ ಹೊಂದಿರುವ ಯಾವುದೇ ಬ್ಯಾಂಕ್ ನಲ್ಲಿ ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆ ಸಂಖ್ಯೆಯನ್ನು, ಅಟಲ್ ಪಿಂಚಣಿ ಯೋಜನೆಗೆ ನೋಂದಾಯಿಸಿಕೊಳ್ಳಬೇಕು. ಹೂಡಿಕೆಯ ಮೊತ್ತವನ್ನು ಯಾವಾಗಲೂ ಖಾತೆಯಲ್ಲಿ ಇಟ್ಟಿರಬೇಕು. ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಆಧಾರ್ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನೀಡಿದ್ರೆ ಎಸ್ಎಂಎಸ್ ಮೂಲಕ ನಿಮಗೆ ಮಾಹಿತಿ ಬರ್ತಿರುತ್ತದೆ.
ಹುಡುಗಿಗೆ ಕೊರೊನಾ ಲಸಿಕೆ ಹಾಕುವಷ್ಟರಲ್ಲಿ ಆರೋಗ್ಯ ಸಿಬ್ಬಂದಿಗೆ ಸುಸ್ತೋಸುಸ್ತು…!
18-40 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಅಟಲ್ ಪಿಂಚಣಿ ಯೋಜನೆಯಡಿ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ಕನಿಷ್ಠ 20 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಯೋಜನೆಯಲ್ಲಿ ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಅವಧಿಯಲ್ಲಿ ಹೂಡಿಕೆ ಮಾಡಬಹುದು.