alex Certify ಲೈಬೀರಿಯಾದಲ್ಲಿ ಇಂಧನ ಟ್ಯಾಂಕರ್ ಸ್ಫೋಟಗೊಂಡು ಘೋರ ದುರಂತ : 40 ಮಂದಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲೈಬೀರಿಯಾದಲ್ಲಿ ಇಂಧನ ಟ್ಯಾಂಕರ್ ಸ್ಫೋಟಗೊಂಡು ಘೋರ ದುರಂತ : 40 ಮಂದಿ ಸಾವು

ಮೊನ್ರೊವಿಯಾ: ಉತ್ತರ-ಮಧ್ಯ ಲೈಬೀರಿಯಾದಲ್ಲಿ ಅನಿಲ ಟ್ಯಾಂಕರ್ ಸ್ಫೋಟಗೊಂಡ ನಂತರ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ಪಶ್ಚಿಮ ಆಫ್ರಿಕಾದ ದೇಶದ ಮುಖ್ಯ ವೈದ್ಯಕೀಯ ಅಧಿಕಾರಿ ಫ್ರಾನ್ಸಿಸ್ ಕಟೆಹ್ ತಿಳಿಸಿದ್ದಾರೆ.

ಲೋವರ್ ಬಾಂಗ್ ಕೌಂಟಿಯ ಟೊಟೊಟಾದಲ್ಲಿ ಇಂಧನ ಟ್ರಕ್ ಸ್ಪೋಟಗೊಂಡಿದೆ. ಈ ದುರ್ಘಟನೆಯಲ್ಲಿ  40 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಕಟೇಹ್ ಸುದ್ದಿಗಾರರಿಗೆ ತಿಳಿಸಿದರು.

ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಕಳಪೆ ರಸ್ತೆ ಸುರಕ್ಷತೆ ಮತ್ತು ದುರ್ಬಲ ಮೂಲಸೌಕರ್ಯಗಳು ಉಪ-ಸಹಾರನ್ ಆಫ್ರಿಕಾವನ್ನು ಅಪಘಾತಗಳಿಗೆ ವಿಶ್ವದ ಮಾರಕ ಪ್ರದೇಶವನ್ನಾಗಿ ಮಾಡಿವೆ, ಸಾವಿನ ಪ್ರಮಾಣವು ಯುರೋಪಿಯನ್ ಸರಾಸರಿಗಿಂತ ಮೂರು ಪಟ್ಟು ಹೆಚ್ಚಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...