ಮೊನ್ರೊವಿಯಾ: ಉತ್ತರ-ಮಧ್ಯ ಲೈಬೀರಿಯಾದಲ್ಲಿ ಅನಿಲ ಟ್ಯಾಂಕರ್ ಸ್ಫೋಟಗೊಂಡ ನಂತರ ಕನಿಷ್ಠ 40 ಜನರು ಸಾವನ್ನಪ್ಪಿದ್ದಾರೆ ಎಂದು ಪಶ್ಚಿಮ ಆಫ್ರಿಕಾದ ದೇಶದ ಮುಖ್ಯ ವೈದ್ಯಕೀಯ ಅಧಿಕಾರಿ ಫ್ರಾನ್ಸಿಸ್ ಕಟೆಹ್ ತಿಳಿಸಿದ್ದಾರೆ.
ಲೋವರ್ ಬಾಂಗ್ ಕೌಂಟಿಯ ಟೊಟೊಟಾದಲ್ಲಿ ಇಂಧನ ಟ್ರಕ್ ಸ್ಪೋಟಗೊಂಡಿದೆ. ಈ ದುರ್ಘಟನೆಯಲ್ಲಿ 40 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಕಟೇಹ್ ಸುದ್ದಿಗಾರರಿಗೆ ತಿಳಿಸಿದರು.
ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಕಳಪೆ ರಸ್ತೆ ಸುರಕ್ಷತೆ ಮತ್ತು ದುರ್ಬಲ ಮೂಲಸೌಕರ್ಯಗಳು ಉಪ-ಸಹಾರನ್ ಆಫ್ರಿಕಾವನ್ನು ಅಪಘಾತಗಳಿಗೆ ವಿಶ್ವದ ಮಾರಕ ಪ್ರದೇಶವನ್ನಾಗಿ ಮಾಡಿವೆ, ಸಾವಿನ ಪ್ರಮಾಣವು ಯುರೋಪಿಯನ್ ಸರಾಸರಿಗಿಂತ ಮೂರು ಪಟ್ಟು ಹೆಚ್ಚಾಗಿದೆ.