alex Certify Good News: ಬೆಂಗಳೂರಿನಲ್ಲಿ ಶುರುವಾಗಿದೆ ಹೊಸ ಇವಿ ಚಾರ್ಜಿಂಗ್‌ ಹಬ್‌ – ಏಕಕಾಲದಲ್ಲಿ 50 ಕಾರುಗಳ ಚಾರ್ಜಿಂಗ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Good News: ಬೆಂಗಳೂರಿನಲ್ಲಿ ಶುರುವಾಗಿದೆ ಹೊಸ ಇವಿ ಚಾರ್ಜಿಂಗ್‌ ಹಬ್‌ – ಏಕಕಾಲದಲ್ಲಿ 50 ಕಾರುಗಳ ಚಾರ್ಜಿಂಗ್‌

ಸ್ಟಾರ್ಟಪ್‌ ಸಿಟಿ ಎಂದೂ ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ 50 ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ ಸಾರ್ವಜನಿಕ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಚಾರ್ಜಿಂಗ್ ಹಬ್ ಅನ್ನು ಆರಂಭಿಸಲಾಗಿದೆ ಎಂದು ಫೋರ್ಟಮ್ ಚಾರ್ಜ್ ಅಂಡ್ ಡ್ರೈವ್ ಇಂಡಿಯಾ ಹೇಳಿದೆ.

ಈ ಸ್ಥಳಗಳಲ್ಲಿ ಏಕಕಾಲದಲ್ಲಿ 50 ವಾಹನಗಳನ್ನು ಚಾರ್ಜ್ ಮಾಡಲು ಸಾಧ್ಯವಿದ್ದು, ಎಲೆಕ್ಟ್ರಿಕ್ ಕಾರುಗಳು, ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳಿಗೆ ಚಾರ್ಜಿಂಗ್‌ ಮಾಡಲು ಅವಕಾಶ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಫೋರ್ಟಮ್ ಚಾರ್ಜ್ ಅಂಡ್ ಡ್ರೈವ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್, ಆಂಡ್ರಾಯ್ಡ್‌ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ, ಇವಿ ಬಳಕೆದಾರರಿಗೆ ಇಸಿ-ಚಾರ್ಜಿಂಗ್ ಕೇಂದ್ರಗಳನ್ನು ಪತ್ತೆಹಚ್ಚಲು ಮತ್ತು ಡಿಜಿಟಲ್ ಪಾವತಿ ಮಾಡಲು ಅನುಕೂಲ ಮಾಡಿಕೊಡುತ್ತದೆ.

ಈ ಕಣ್ಕಟ್ಟು ಚಿತ್ರದಲ್ಲಿ ಅಡಗಿರುವ ಪದಗಳನ್ನು ಹುಡುಕುವುದೊಂದು ದೊಡ್ಡ ಸವಾಲು…! ನೀವೂ ಒಮ್ಮೆ ಟ್ರೈ ಮಾಡಿ ನೋಡಿ

ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಅವರು ಹಬ್ ಅನ್ನು ಇತ್ತೀಚೆಗೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ 45,000 ಎಲೆಕ್ಟ್ರಿಕ್ ವಾಹನ-ಬಳಕೆದಾರರು ಇದ್ದಾರೆ, ಇದು ಇವಿಗಳ ಬೇಡಿಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತದೆ ಎಂದರು.

ನಾವು ಯಾವತ್ತೂ ಗಮನ ನೀಡುವ ನಗರಗಳ ಪೈಕಿ ಬೆಂಗಳೂರು ಕೂಡ ಒಂದು. ಈ ವರ್ಷ ಕೊನೆಯ ವೇಳೆಗೆ ನಗರದಲ್ಲಿ 200 ಕ್ಕೂ ಹೆಚ್ಚು ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದ್ದೇವೆʼ ಎಂದು ಫೋರ್ಟಮ್ ಚಾರ್ಜ್ ಮತ್ತು ಡ್ರೈವ್ ಕಾರ್ಯನಿರ್ವಾಹಕ ನಿರ್ದೇಶಕ ಅವಧೇಶ್ ಝಾ ಹೇಳಿದ್ದಾರೆ.

ಫೋರ್ಟಮ್ ಇದುವರೆಗೆ ಎಂಟು ರಾಜ್ಯಗಳು ಮತ್ತು 13 ನಗರಗಳಲ್ಲಿ 188 ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಿದೆ ಮತ್ತು ಅವುಗಳನ್ನು ಯಾವುದೇ ವಿದ್ಯುತ್‌ ಚಾಲಿತ ವಾಹನಗಳ ಬಳಕೆದಾರರು ಬಳಸಬಹುದಾಗಿದೆ ಎಂದು ಕಂಪನಿ ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...