ವಯಸ್ಸು ಎನ್ನುವ ಸಂಖ್ಯೆ ದೇಹದ ಮೇಲೆ ಪರಿಣಾಮ ಬೀರಲು ಬಿಡಬೇಕೋ , ಬೇಡವೋ ಎಂದು ತೀರ್ಮಾನಿಸುವವರು ನಾವೇ ! ಹೌದು, ಅದಕ್ಕೆ ಉದಾಹರಣೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿನ 75 ವರ್ಷದ ವೆಂಕಟ ರಮಣ ಅವರು.
ವಿದ್ಯುತ್ ಪೂರೈಕೆ ಇಲಾಖೆಯಿಂದ ನಿವೃತ್ತರಾಗಿರುವ ಇವರು ರನ್ನಿಂಗ್ ಮತ್ತು ವಾಕಿಂಗ್ ನಲ್ಲಿ ಕಿ.ಮೀ. ಗಟ್ಟಲೆ ಸಾಗಿ ಸುಮಾರು 100 ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ. ನಗರದ ಯುವಕರ ಪಾಲಿಗೆ ಇವರು ’ರನ್ನಿಂಗ್ ಬಾಹುಬಲಿ’ಯಂತೆ.
BIG NEWS: `ಬಾಹುಬಲಿ: ಬಿಫೋರ್ ದಿ ಬಿಗಿನಿಂಗ್’ ಪ್ರಸಾರ ನಿರಾಕರಿಸಿದ ನೆಟ್‌ಫ್ಲಿಕ್ಸ್..!
800 ಮೀಟರ್ ರನ್ನಿಂಗ್ ನಿಂದ 5000 ಮೀಟರ್ ರನ್ನಿಂಗ್ ವರೆಗೆ ಹಲವು ನಗರಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕಗಳನ್ನು ಬಾಚಿಕೊಂಡಿದ್ದಾರೆ. ಅವರ ಪ್ರಕಾರ ,’’ನನಗೆ ವಯಸ್ಸಾಗಿದೆ ಎಂದು ಯಾವತ್ತಿಗೂ ನಾನು ಅಂದುಕೊಂಡೇ ಇಲ್ಲ. ಶಾಂತ ಮನಸ್ಸು ಕಾಪಾಡಿಕೊಂಡರೆ ಆರೋಗ್ಯ ಭಾಗ್ಯ ನಿಮ್ಮ ಕಾಲಿನಡಿಯಲ್ಲಿ ಬಿದ್ದಿರುತ್ತದೆ’’ ಎನ್ನುತ್ತಾರೆ.
ಕೊರೊನಾ ಸಾಂಕ್ರಾಮಿಕದ ಆತಂಕದಿಂದಾಗಿ ಕಳೆದ ಒಂದು ವರ್ಷದಿಂದ ಅವರು ಮತ್ತು ಅವರ ಸ್ನೇಹಿತರ ಕೂಟವು ರನ್ನಿಂಗ್ ಮತ್ತು ವಾಕಿಂಗ್‌ಗೆ ಹೆಚ್ಚು ಕಡೆಗಳಲ್ಲಿ ತಿರುಗಾಡಲು ಆಗುತ್ತಿಲ್ಲ ಎಂಬ ಬೇಸರ ಅವರಲ್ಲಿದೆ.