alex Certify BIG NEWS: `ಬಾಹುಬಲಿ: ಬಿಫೋರ್ ದಿ ಬಿಗಿನಿಂಗ್’ ಪ್ರಸಾರ ನಿರಾಕರಿಸಿದ ನೆಟ್‌ಫ್ಲಿಕ್ಸ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: `ಬಾಹುಬಲಿ: ಬಿಫೋರ್ ದಿ ಬಿಗಿನಿಂಗ್’ ಪ್ರಸಾರ ನಿರಾಕರಿಸಿದ ನೆಟ್‌ಫ್ಲಿಕ್ಸ್..!

ಸಾರ್ವಕಾಲಿಕ ಮೆಚ್ಚುಗೆ ಚಿತ್ರಗಳಲ್ಲಿ ಬಾಹುಬಲಿ ಒಂದು. ಬಾಹುಬಲಿ 2 ಬಿಡುಗಡೆಯಾಗಿ ಐದು ವರ್ಷ ಕಳೆದಿದೆ. ಈಗ್ಲೂ ಜನರು ಬಾಹುಬಲಿ ವೀಕ್ಷಿಸಲು ಇಷ್ಟಪಡ್ತಾರೆ. ಬಾಹುಬಲಿ ಪಾರ್ಟ್ 1,ಪಾರ್ಟ್ 2 ನಂತ್ರ ತಯಾರಕರು ಬಾಹುಬಲಿ: ಬಿಫೋರ್ ದಿ ಬಿಗಿನಿಂಗ್ ಗೆ ಕೈ ಹಾಕಿದ್ದರು.

ಇದ್ರಲ್ಲಿ ಬಾಹುಬಲಿ : ದಿ ಬಿಗಿನಿಂಗ್ ಹಿಂದಿನ ಕಥೆಯನ್ನು ತೋರಿಸಲಾಗುವುದು. ವರದಿ ಪ್ರಕಾರ, 100 ಕೋಟಿ ವೆಚ್ಚದ ಬಾಹುಬಲಿ ಚಿತ್ರದ ಮುಂದಿನ ಭಾಗವಾದ ʼಬಾಹುಬಲಿ: ಬಿಫೋರ್ ದಿ ಬಿಗಿನಿಂಗ್ʼ ಬಿಡುಗಡೆ ಮಾಡಲು ನೆಟ್‌ಫ್ಲಿಕ್ಸ್ ನಿರಾಕರಿಸಿದೆ. ಇದರೊಂದಿಗೆ 200 ಕೋಟಿ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುವ ಯೋಜನೆ ರೂಪಿಸಲಾಗಿದೆ.

ಬಾಹುಬಲಿ: ಬಿಫೋರ್ ದಿ ಬಿಗಿನಿಂಗ್ ಬಗ್ಗೆ ನೆಟ್‌ಫ್ಲಿಕ್ಸ್ ಗೆ ಸಂತೋಷವಾಗಿರಲಿಲ್ಲ. ಈಗ ಚಿತ್ರದ ನಿರ್ಮಾಪಕರು ಈ ಚಿತ್ರದ ಚಿತ್ರಕಥೆ, ತಾರಾಗಣ ಮತ್ತು ತಾಂತ್ರಿಕ ತಂಡದಲ್ಲಿ ಮತ್ತೆ ಕೆಲಸ ಮಾಡುತ್ತಿದ್ದಾರೆ. ಇದನ್ನು ಮತ್ತೆ ಚಿತ್ರೀಕರಿಸಲು ಸಿದ್ಧರಾಗಿದ್ದಾರೆ. ಬಾಹುಬಲಿಯು ಜನರ ಮೇಲೆ ಬೀರಿರುವ ಪ್ರಭಾವವನ್ನು ಗಮನದಲ್ಲಿಟ್ಟುಕೊಂಡು ನೆಟ್‌ಫ್ಲಿಕ್ಸ್ ಮುಂದಿನ ಭಾಗ ಇನ್ನೂ ಉತ್ತಮವಾಗಿರಬೇಕೆಂದು ಬಯಸಿದೆ. ಹೊಸ ಭಾಗದ ಬಜೆಟ್ 200 ಕೋಟಿಗಳಾಗಿರಲಿವೆ. ಈ ಹಿಂದೆ ತಿರಸ್ಕರಿಸಿದ ವಿಷಯದ ವೆಚ್ಚವನ್ನು ಸೇರಿಸಿದ್ರೆ ಸಂಪೂರ್ಣ ವೆಚ್ಚ 300 ಕೋಟಿಗಳಾಗಿರುತ್ತದೆ.

ಈ ಚಿತ್ರವನ್ನು 9 ಕಂತುಗಳು ಮತ್ತು ಎರಡು ಸರಣಿಗಳಲ್ಲಿ ತೋರಿಸಲಾಗುವುದು. ಇದು ಶಿವಗಾಮಿ ದೇವಿಯು ಮಹಿಷ್ಮತಿಯಲ್ಲಿ ಹೇಗೆ ಜನಿಸಿದಳು ಎಂಬ ವಿಷ್ಯ ಹೊಂದಿರುತ್ತದೆ. ರಾಣಿಯಾಗುವವರೆಗೂ ಶಿವಗಾಮಿಯ ಪ್ರಯಾಣದ ಪೂರ್ಣ ಕಥೆಯನ್ನು ತೋರಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...