alex Certify ಮಕ್ಕಳಲ್ಲಿ ಲಕ್ಷಣರಹಿತ ಸೋಂಕಿನ ಬಗ್ಗೆ ಮಹತ್ವದ ಮಾಹಿತಿ ನೀಡಿದ ತಜ್ಞರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಲ್ಲಿ ಲಕ್ಷಣರಹಿತ ಸೋಂಕಿನ ಬಗ್ಗೆ ಮಹತ್ವದ ಮಾಹಿತಿ ನೀಡಿದ ತಜ್ಞರು

ಮಕ್ಕಳಲ್ಲಿ ಕೋವಿಡ್​ 19 ಸೋಂಕು ಲಕ್ಷಣರಹಿತವಾಗಿದ್ದರೆ ಹಾಗೂ ಅವರು ಸೋಂಕಿನ ಅತಿಯಾದ ಲಕ್ಷಣಗಳನ್ನು ಹೊಂದಿರದೇ ಇದ್ದರೆ ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಿಜೋರಾಂ ಹಾಗೂ ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ತಿದೆ. ಈ ಅಭಿಪ್ರಾಯದ ಹೊರತಾಗಿಯೂ ಆಸ್ಪತ್ರೆ ಸೌಕರ್ಯಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ವರ್ಷದ ಮಾರ್ಚ್​ನಿಂದ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇಕಡಾವಾರು ಸೋಂಕಿನ ಪ್ರಮಾಣ ಹೆಚ್ಚಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಮಿಜೋರಾಂ, ಮೇಘಾಲಯ, ಮಣಿಪುರ ಹಾಗೂ ಕೇರಳದಿಂದ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗುತ್ತಿದೆ.

ಮಿಜೋರಾಂನಲ್ಲಿ ಮಂಗಳವಾರ 1502 ಪ್ರಕರಣಗಳು ವರದಿಯಾಗಿದ್ದು ಇದರಲ್ಲಿ 300 ಮಕ್ಕಳೇ ಇದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 72,883 ಆಗಿದೆ.

ಎನ್​ಟಿಎಜಿಐನ ಕೋವಿಡ್ 19 ವರ್ಕಿಂಗ್​ ಗ್ರೂಪ್​ನ ಅಧ್ಯಕ್ಷ ಡಾ. ಎನ್​ಕೆ ಅರೋರಾ ಈ ವಿಚಾರವಾಗಿ ಮಾಹಿತಿ ನೀಡಿದ್ದು, ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ಅವರಲ್ಲಿ ಲಕ್ಷಣ ರಹಿತ ಸೊಂಕು ಇದ್ದರೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ವಯಸ್ಕರಂತೆಯೇ ಮಕ್ಕಳು ಕೂಡ ಲಕ್ಷಣ ರಹಿತ ಸೋಂಕಿನಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಪಾಯವನ್ನು ಹೊಂದಿರುತ್ತಾರೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...