alex Certify BIG NEWS: 2030 ರಲ್ಲಿ ಚಂದ್ರನಲ್ಲಿ ಮಾನವರ ವಾಸ; ನಾಸಾದಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 2030 ರಲ್ಲಿ ಚಂದ್ರನಲ್ಲಿ ಮಾನವರ ವಾಸ; ನಾಸಾದಿಂದ ಮಹತ್ವದ ಮಾಹಿತಿ

ನ್ಯೂಯಾರ್ಕ್​: 2030ರ ಹೊತ್ತಿಗೆ ಮಾನವ ಚಂದ್ರನ ಮೇಲೆ ವಾಸಮಾಡಬಹುದು ಎಂದು ನಾಸಾ ಹೇಳಿದೆ. ನಾಸಾದ ಓರಿಯನ್ ಬಾಹ್ಯಾಕಾಶ ನೌಕೆಯ ಅಭಿಯಾನದ ಪ್ರಮುಖರಾದ ಹೊವಾರ್ಡ್ ಹೂ ಈ ಹೇಳಿಕೆ ನೀಡಿದ್ದಾರೆ. ಚಂದ್ರ ಗ್ರಹದಲ್ಲಿ ವಾಸಿಸುವ ಯೋಜನೆಗೆ ಸಹಾಯ ಮಾಡಲು ರೋವರ್‌ಗಳು ಕೆಲಸ ಮಾಡಲಿವೆ ಎಂದು ಹೊವಾರ್ಡ್​ ಹೇಳಿದ್ದಾರೆ.

ಚಂದ್ರನಲ್ಲಿ ಮನುಷ್ಯರಿಗೆ ವಾಸಿಸಲು ಸ್ಥಳವಿದೆ. ನಾವು ಚಂದ್ರನ ಮೇಲೆ ಮನುಷ್ಯರನ್ನು ಕಳುಹಿಸುತ್ತೇವೆ. ಮನುಷ್ಯರು ಅಲ್ಲಿಯೇ ಉಳಿದು ವೈಜ್ಞಾನಿಕ ಕೆಲಸ ಮಾಡಲಿದ್ದಾರೆ. ಶೀಘ್ರದಲ್ಲೇ ಚಂದ್ರ ಗ್ರಹದ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ಈ ಕಾರ್ಯಾಚರಣೆಯನ್ನು ನಾಸಾ ಮಾಡಲಿದೆ. ಇದರ ಭಾಗವಾಗಿ ಆರ್ಟೆಮಿಸ್ ರಾಕೆಟ್ ಮೂಲಕ ಓರಿಯನ್ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಹೊವಾರ್ಡ್ ನೀಡಿದ್ದಾರೆ.

ಅಂದಹಾಗೆ ನಾಸಾ ಕಳೆದ ವಾರ ಆರ್ಟೆಮಿಸ್-1 ಮಿಷನ್‌ ಅನ್ನು ಪ್ರಾರಂಭಿಸಿದೆ. ಈ ರಾಕೆಟ್‌ನಲ್ಲಿ ಸಿಬ್ಬಂದಿ ಇಲ್ಲದ ಓರಿಯನ್ ಬಾಹ್ಯಾಕಾಶ ನೌಕೆಯ ಮೊದಲ ಪರೀಕ್ಷಾರ್ಥ ಹಾರಾಟ ಇದಾಗಿದೆ. ಓರಿಯನ್ ಸುಮಾರು 42 ದಿನಗಳ ಕಾಲ ಚಂದ್ರನನ್ನು ಪರೀಕ್ಷಿಸಲಿದೆ. ಇದು ಡಿಸೆಂಬರ್ 11ರಂದು ಭೂಮಿಗೆ ಮರಳುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...