ಬೊಜ್ಜು ಶರೀರಿದ ಸಮಸ್ಯೆ. ಬೊಜ್ಜು ಬೇರೆ ರೋಗಗಳನ್ನು ಆಹ್ವಾನಿಸುತ್ತದೆ. ಮಧುಮೇಹ, ನಿದ್ರಾಹೀನತೆ, ಸಂಧಿವಾತ ಸೇರಿದಂತೆ ಅನೇಕ ಖಾಯಿಲೆಗಳಿಗೆ ತುತ್ತಾಗ್ತಾರೆ. ಅನಿಯಮಿತ ದಿನಚರಿ, ನಿದ್ರಾಹೀನತೆ, ಆಹಾರ-ಪಾನಿಯಗಳು ಬೊಜ್ಜಿಗೆ ಕಾರಣವಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರಕ್ಕೂ ಬೊಜ್ಜಿಗೂ ಸಂಬಂಧವಿದೆ. ವೈದಿಕ ಜ್ಯೋತಿಷ್ಯದಲ್ಲಿ ಗುರು ಗ್ರಹವನ್ನು ಬೆಳವಣಿಗೆಯ ಅಂಶವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಜಾತಕದಲ್ಲಿ ಗುರು ದುರ್ಬಲವಾಗಿದ್ದರೆ, ಶತ್ರು ಗ್ರಹವನ್ನು ಎದುರಿಸುತ್ತಿದ್ದರೆ ಅಂಥ ವ್ಯಕ್ತಿ ಸ್ಥೂಲಕಾಯದಿಂದ ಬಳಲುತ್ತಾನೆ.
ಶಾಸ್ತ್ರದ ಪ್ರಕಾರ ವೃಷಭ, ಕನ್ಯಾ, ಮಕರ ರಾಶಿಯವರನ್ನು ಹೆಚ್ಚಾಗಿ ಬೊಜ್ಜು ಕಾಡುತ್ತದೆ. ಅನಿಯಮಿತ ಆಹಾರದಿಂದಾಗಿ ಮಿಥುನ, ತುಲಾ, ಕುಂಭ ರಾಶಿಯವರಿಗೆ ಬೊಜ್ಜು ಕಾಡುವ ಸಾಧ್ಯತೆಯಿರುತ್ತದೆ. ಜಲತತ್ವ ಹೊಂದಿರುವ ಮೀನ, ಕರ್ಕ, ವೃಶ್ಚಿಕ ರಾಶಿಯವರನ್ನೂ ಸ್ಥೂಲಕಾಯ ಕಾಡುತ್ತದೆ. ಅಗ್ನಿ ತತ್ವದ ಮೇಷ, ಸಿಂಹ ಹಾಗೂ ಧನು ರಾಶಿಯವರಿಗೆ ಹೆಚ್ಚಾಗಿ ಸ್ಥೂಲಕಾಯ ಕಾಡುವುದಿಲ್ಲ. ಸ್ವಲ್ಪ ಮಟ್ಟಿಗೆ ಬೊಜ್ಜು ಈ ರಾಶಿಯವರನ್ನು ಮಧ್ಯವಯಸ್ಸಿನಲ್ಲಿ ಕಾಡುತ್ತದೆ.
ಜಾತಕದಲ್ಲಿ ಗುರು ಸ್ಥಾನವನ್ನು ಬಲಪಡಿಸಬೇಕು. ಬೊಜ್ಜು ವೇಗವಾಗಿ ಹೆಚ್ಚಾಗುತ್ತಿದ್ದರೆ ಹಳದಿ ನೀಲಿಮಣಿಯನ್ನು ಧರಿಸಬೇಕು. ಪ್ರತಿ ದಿನ ಸೂರ್ಯನಿಗೆ ಜಲ ಅರ್ಪಿಸಿ. ಪದ್ಮಾಸನದಲ್ಲಿ ಕುಳಿತುಕೊಳ್ಳಲು ಅಭ್ಯಾಸ ಮಾಡಿ. ಒಳ್ಳೆಯ ದಿನಚರಿ ಅನುಸರಿಸಿ. ಹೊಕ್ಕಳಿನ ಮೇಲೆ ಕೆಂಪು ದಾರ ಕಟ್ಟಿಕೊಳ್ಳಿ. ಬೆಳಿಗ್ಗೆ ಪಪ್ಪಾಯ ಹಣ್ಣನ್ನು ಸೇವಿಸಿ.