ಅಸ್ಸಾಂನ ಆಸ್ಪತ್ರೆಯೊಂದರಲ್ಲಿ ಹುಟ್ಟುತ್ತಲೇ 5.2 ಕೆಜಿ ತೂಕವಿರುವ ಮಗುವೊಂದು ರಾಜ್ಯದ ಇತಿಹಾಸದಲ್ಲೇ ಹುಟ್ಟುತ್ತಲೇ ಅತ್ಯಂತ ಹೆಚ್ಚು ತೂಕವಿರುವ ಮಗುವೆಂಬ ದಾಖಲೆಗೆ ಪಾತ್ರವಾಗಿದೆ.
ಚಾಚರ್ ಜಿಲ್ಲೆಯ ಸಿಲ್ಚರ್ ಪಟ್ಟಣದ ಕನಕ್ಪುರ್ ಪ್ರದೇಶದ 27 ವರ್ಷದ ತಾಯಿ ಜಯಾ ದಾಸ್ ಈ ಮಗುವಿಗೆ ಜನ್ಮವಿತ್ತಿದ್ದಾರೆ. ಜೂನ್ 15ರಂದು ಇಲ್ಲಿನ ಸತಿಂದ್ರ ಮೋಹನ್ ದೇವಿ ಆಸ್ಪತ್ರೆಗೆ ದಾಖಲಾಗಿದ್ದ ಜಯಾ ದಾಸ್‌ಗೆ ಮೇ 29ರಂದೇ ಹೆರಿಗೆಯಾಗಬೇಕಿತ್ತು.
ಅಲೋಪಥಿ ಔಷಧಿ ನೀಡಲು ಆಯುರ್ವೇದ ವೈದ್ಯರಿಗೆ ಗ್ರೀನ್ ಸಿಗ್ನಲ್: ಉತ್ತರಾಖಂಡ್ ಸರ್ಕಾರದಿಂದ ಮಹತ್ವದ ನಿರ್ಧಾರ
ರಾಜ್ಯದಲ್ಲಿ ಹೊಸದಾಗಿ ಜನಿಸಿದ ಮಗುವಿನ ಸರಾಸರಿ ತೂಕ 2.5 ಕಿಲೋ ಇದ್ದು, ಕೆಲವೊಂದು ನಿದರ್ಶನಗಳಲ್ಲಿ ಹೊಸದಾಗಿ ಜನಿಸಿದ ಮಕ್ಕಳು 4 ಕೆಜಿ ತೂಕವಿರುವ ನಿದರ್ಶನಗಳೂ ಇವೆ ಎಂದು ತಿಳಿಸಿದ್ದಾರೆ. ಈ ಮಗು 5.2 ಕೆಜಿ ತೂಕವಿದ್ದು, ಆ ಕುರಿತ ದಾಖಲೆಯನ್ನು ಆಸ್ಪತ್ರೆಯ ಹಿರಿಯ ಅಧಿಕಾರಿಗಳು ನೀಡಿದ್ದಾರೆ.
ಕಾರು ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್: ಮತ್ತೆ ಏರಿಕೆಯಾಗಲಿದೆ ʼಮಾರುತಿʼ ಬೆಲೆ
ಮಂಗಳವಾರದಂದು ಸಿಸೇರಿಯನ್ ಕ್ರಿಯೆ ಮೂಲಕ ಮಗುವನ್ನು ಭೂಮಿಗೆ ಬರಮಾಡಿಕೊಂಡಿದ್ದಾರೆ ಡಾ. ಹನೀಫ್ ಮೊಹಮ್ಮದ್ ಅಫ್ಸರ್ ಆಲಂ ನೇತೃತ್ವದ ವೈದ್ಯರ ತಂಡ.
ಜಯಾ ಹಾಗೂ ಬಾದಲ್ ದಾಸ್‌ರ ಮೊದಲ ಮಗು ಹುಟ್ಟುತ್ತಲೇ 3.8 ಕೆಜಿ ತೂಕವಿತ್ತು. ಇದೀಗ ಎರಡನೇ ಮಗು ಹುಟ್ಟುತ್ತಲೇ 5.2 ಕೆಜಿ ತೂಕವಿದ್ದು ದಾಖಲೆ ನಿರ್ಮಿಸಿದೆ.