alex Certify ಕೊರೊನಾ ಸೋಂಕು ಹೆಚ್ಚಳ: ಈ ರಾಜ್ಯದ 7 ಜಿಲ್ಲೆಗಳಲ್ಲಿ ಕಂಪ್ಲೀಟ್ ʼಲಾಕ್ ​ಡೌನ್ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕು ಹೆಚ್ಚಳ: ಈ ರಾಜ್ಯದ 7 ಜಿಲ್ಲೆಗಳಲ್ಲಿ ಕಂಪ್ಲೀಟ್ ʼಲಾಕ್ ​ಡೌನ್ʼ

ಆಸ್ಸಾಂನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಸಾಂ ಸರ್ಕಾರವು 7 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್​ಡೌನ್​ ಆದೇಶ ಜಾರಿಗೆ ತಂದಿದೆ. ಈ ಸಂಪೂರ್ಣ ಲಾಕ್​ಡೌನ್​ ಆದೇಶವು ನಾಳೆಯಿಂದ ಜಾರಿಗೆ ಬರಲಿದೆ. ಮುಂದಿನ ಆದೇಶದವರೆಗೂ ಲಾಕ್​ಡೌನ್​ ಈ 7 ಜಿಲ್ಲೆಗಳಲ್ಲಿ ಮುಂದುವರಿಯಲಿದೆ.

ಆಸ್ಸಾಂ ಸರ್ಕಾರದ ಆದೇಶದಂತೆ ಗೋಲ್​ಪರ, ಗೋಲಾಘಾಟ್​, ಲಖೀಂಪುರ, ಸೋನಿತ್​ಪುರ, ಬಿಸ್ವನಾಥ್​ ಹಾಗೂ ಮೋರಿಗಾಂವ್​​ನಲ್ಲಿ ಲಾಕ್​ಡೌನ್​ ಆದೇಶ ಜಾರಿಗೆ ಬರಲಿದೆ.

ಲಾಕ್​ಡೌನ್​ ಆದೇಶದ ಹಿನ್ನೆಲೆಯಲ್ಲಿ ಈ ಏಳು ಜಿಲ್ಲೆಯಲ್ಲಿ ಸಂಪೂರ್ಣ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಈ ಸಮಯದಲ್ಲಿ ವಾಣಿಜ್ಯ ಮಳಿಗೆಗಳು, ಹೋಟೆಲ್​ಗಳು, ಅಂಗಡಿಗಳು ಬಂದ್​ ಇರಲಿವೆ. ಇದರ ಜೊತೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ವಾಹನಗಳ ಸಂಚಾರವೂ ಇರೋದಿಲ್ಲ. ಈ ಮೂಲಕ ಅಂತರ್​ಜಿಲ್ಲಾ ಓಡಾಟಕ್ಕೂ ನಿರ್ಬಂಧ ಹೇರಲಾಗಿದೆ.

ಈ ಏಳು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಮಿತಿಮೀರುತ್ತಿದೆ. ಹೀಗಾಗಿ ನಾಳೆಯಿಂದ ಈ ಏಳು ಜಿಲ್ಲೆಗಳಲ್ಲಿ 24 ಗಂಟೆಗಳ ಕಾಲ ಕರ್ಫ್ಯೂ ಆದೇಶ ಜಾರಿಯಲ್ಲಿ ಇರಲಿದೆ.

ಮಧ್ಯಮ ಪ್ರಮಾಣದಲ್ಲಿ ಕೊರೊನಾ ಸೋಂಕನ್ನ ಹೊಂದಿರುವ ಜಿಲ್ಲೆಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕರ್ಫ್ಯೂ ಆದೇಶ ಜಾರಿಯಲ್ಲಿ ಇರಲಿದೆ. ಕೊರೊನಾ ಸೋಂಕಿನ ಪ್ರಮಾಣದಲ್ಲಿ ಸುಧಾರಣೆ ಕಾಣುತ್ತಿರುವ ಜಿಲ್ಲೆಗಳಲ್ಲಿ ಸಂಜೆ 5 ರಿಂದ ಬೆಳಗ್ಗೆ 5ರವರೆಗೆ ಕರ್ಫ್ಯೂ ಆದೇಶ ಜಾರಿಯಲ್ಲಿ ಇರಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...