alex Certify ಮದ್ರಸಾದಲ್ಲಿ ವಿದ್ಯಾರ್ಥಿಯ ಶಿರಚ್ಛೇದಿತ ಶವ ಪತ್ತೆ: ಇಮಾಮ್ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದ್ರಸಾದಲ್ಲಿ ವಿದ್ಯಾರ್ಥಿಯ ಶಿರಚ್ಛೇದಿತ ಶವ ಪತ್ತೆ: ಇಮಾಮ್ ಅರೆಸ್ಟ್

ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ಮದರಸಾವೊಂದರ ಹಾಸ್ಟೆಲ್‌ನಲ್ಲಿ 12 ವರ್ಷದ ವಿದ್ಯಾರ್ಥಿಯ ಶಿರಚ್ಛೇದಿತ ಶವ ಭಾನುವಾರ ಪತ್ತೆಯಾಗಿದೆ.

ಧೋಲೈ ಪ್ರದೇಶದ ದಾರುಸ್ ಸಲಾಮ್ ಹಫಿಜಿಯಾ ಮದ್ರಸಾದಲ್ಲಿ ಈ ಘಟನೆ ನಡೆದಿದೆ. ಹಾಸ್ಟೆಲ್ ಕೊಠಡಿಯೊಳಗೆ ಮೃತರು ಸೇರಿದಂತೆ 7 ವಿದ್ಯಾರ್ಥಿಗಳು ಇದ್ದರು. ಅವರ ಕೊಠಡಿ ಸಹವಾಸಿ ಬೆಳಿಗ್ಗೆ ಎದ್ದಾಗ ಶಿರಚ್ಛೇದಿತ ದೇಹವನ್ನು ನೋಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರು ದಾರುಸ್ ಸಲಾಂ ಹಫೀಜಿಯಾ ಮದ್ರಸಾದ ಇಮಾಮ್‌ನನ್ನು ಬಂಧಿಸಿದ್ದಾರೆ. ಮೃತ ವಿದ್ಯಾರ್ಥಿಯು ಮದರಸಾ ಹಾಸ್ಟೆಲ್‌ನಿಂದ ತನಗೆ ತಿಳಿಸದೆ ಹೊರಗೆ ಹೋಗುತ್ತಿದ್ದರಿಂದ ಇಮಾಮ್ ಕೋಪಗೊಂಡು ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಆದರೆ, ಇಮಾಮ್ ಆರೋಪವನ್ನು ಅಲ್ಲಗಳೆದಿದ್ದಾರೆ. ಮೃತ ವಿದ್ಯಾರ್ಥಿ ಮೂರು ತಿಂಗಳ ಹಿಂದೆ ಮದ್ರಸಾಗೆ ದಾಖಲಾಗಿದ್ದ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...