ಗಿರ್ ರಾಷ್ಟ್ರೀಯ ಉದ್ಯಾನದಲ್ಲಿರುವ ಸಿಂಹವೊಂದರ ಹಳೆಯ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಶೇರ್ ಮಾಡಿಕೊಂಡು 11 ತಿಂಗಳ ಬಳಿಕ ಅದು ಮತ್ತು ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಸಿಂಹವೊಂದು ರಸ್ತೆ ಬದಿನೀರನ್ನು ಕುಡಿಯುತ್ತಿರುವುದನ್ನು ನೋಡಬಹುದಾಗಿದ್ದು, ಹಿನ್ನೆಲೆಯಲ್ಲಿ ವಾಹನ ಬರುತ್ತಿದ್ದು, ಪ್ರವಾಸಿಗರೊಬ್ಬರು ಈ ವಿಡಿಯೋ ಸೆರೆ ಹಿಡಿದಿದ್ದಾರೆ.
ಮನ ಕಲಕುತ್ತೆ ಬಡ ಕೂಲಿ ಕಾರ್ಮಿಕನ ಪುತ್ರಿಯ ಸ್ಟೋರಿ
“ರಸ್ತೆ ರಾಜ..! ಏಷ್ಯಾಟಿಕ್ ಸಿಂಹವೊಂದು ಗಿರ್ ಬಳಿ ಮಾನ್ಸೂನ್ ಅನ್ನು ಸ್ವಾಗತಿಸುತ್ತಿದೆ. ಭೂತಾಯಿಯನ್ನು ಗೌರವಿಸೋಣ” ಎಂದು ಸೆಲೆಬ್ರಿಟಿ ಟ್ವಿಟರ್ ಬಳಕೆದಾರ ಎರಿಕ್ ಸೋಲ್ಹೇಮ್ ಅವರು ಕಳೆದ ವರ್ಷ ಈ ವಿಡಿಯೋ ಶೇರ್ ಮಾಡಿದ್ದರು.
ಸದ್ಯದ ಮಟ್ಟಿಗೆ ಏಷ್ಯಾಟಿಕ್ ಸಿಂಹಗಳು ಗುಜರಾತ್‌ನ ಗಿರ್ ಅರಣ್ಯ ಪ್ರದೇಶದಲ್ಲಿ ಮಾತ್ರವೇ ಸಹಜ ವಾತಾವರಣದಲ್ಲಿ ಕಾಣಸಿಗುತ್ತವೆ.
https://www.instagram.com/p/CQfqG2YLheH/?utm_source=ig_web_copy_link