ಗೂಗಲ್ ಬೆಂಬಲಿತ ತ್ವರಿತ ಕಾಮರ್ಸ್ ಕಂಪನಿ ಡಂಜ಼ೋ ಮೇಲೆ ರಿಲಯನ್ಸ್ ರೀಟೇಲ್ $200 ದಶಲಕ್ಷ ಹೂಡಿಕೆ ಮಾಡಿದೆ. ಈ ಮೂಲಕ ಡಂಜ಼ೋದ ಮಾರುಕಟ್ಟೆ ಮೌಲ್ಯವು $775 ದಶಲಕ್ಷದ ಮಟ್ಟ ತಲುಪಿದೆ.
ಮುಖೇಶ್ ಅಂಬಾನಿ ನೇತೃತ್ವದ ಕಂಪನಿಯು ಎಂಟು ವರ್ಷದ ಈ ಸ್ಟಾರ್ಟ್ಅಪ್ನ 25.5%ನಷ್ಟು ಶೇರುಗಳನ್ನು ಹೊಂದಲಿದೆ. ಈ ಹೊಸ ಹೂಡಿಕೆಯಿಂದಾಗಿ ಕಳೆದ ವರ್ಷ $300 ದಶಲಕ್ಷದಷ್ಟಿದ್ದ ಡಂಜ಼ೋದ ಮಾರುಕಟ್ಟೆ ಮೌಲ್ಯವು ಈ ವರ್ಷ ಎರಡು ಪಟ್ಟಿಗಿಂತ ಹೆಚ್ಚು ವರ್ಧಿಸಿದೆ. ಇದರ ಜೊತೆಗೆ ಇತರ ಹೂಡಿಕೆದಾರರಾದ ಲೈಟ್ಬಾಕ್ಸ್, ಲೈಟ್ರಾಕ್, 3ಎಲ್ ಕ್ಯಾಪಿಟಲ್ ಮತ್ತು ಆಲ್ಟೇರಿಯಾ ಕ್ಯಾಪಿಟಲ್ಗಳ ಮೂಲಕ $40 ಹೂಡಿಕೆ ಕಂಡಿರುವ ಡಂಜ಼ೋ ಈ ಬಾರಿ $240 ದಶಲಕ್ಷದಷ್ಟು ಹೊಸ ಹೂಡಿಕೆ ಕಂಡಿದೆ.
ಬಾಯ್ ಫ್ರೆಂಡ್ ಗೆ ವಿಶ್ ಮಾಡಿದ ಹೃತಿಕ್ ರೋಷನ್ ಮಾಜಿ ಪತ್ನಿ
ಈ ಮೂಲಕ ಏಷ್ಯಾದ ಅತ್ಯಂತ ಸಿರಿವಂತರಾದ ಮುಖೇಶ್ ಅಂಬಾನಿ ಜೆಫ್ ಬೆಜ಼ೋಸ್ರ ಅಮೇಜ಼ಾನ್ ಸಮೂಹದ ಅಮೇಜ಼ಾನ್ ಫ್ರೆಶ್ ಜೊತೆಗೆ ಮೇಲ್ಕಂಡ ಸೇವೆ ಒದಗಿಸುವುದರಲ್ಲಿ ಪೈಪೋಟಿ ಮಾಡಲಿದೆ.
ಇದೇ ವೇಳೆ, $5 ಶತಕೋಟಿ ಮೌಲ್ಯದ ದಿನಸಿ ಡೆಲಿವರಿ ಅಪ್ಲಿಕೇಶನ್ ಸ್ವಿಗ್ಗಿ ಜೊತೆಗೆ ಹೊಸ ಯೂನಿಕಾರ್ನ್ ಬ್ಲಿಂಕಿಟ್, ಜ಼ೆಪ್ಟೋಗಳಂಥ ಸ್ಟಾರ್ಟ್ಅಪ್ಗಳು ಸಹ ಪೈಪೋಟಿದಾರರಾಗಿವೆ.