alex Certify ಏಷ್ಯನ್ ಗೇಮ್ಸ್ 2023 : ಟೇಬಲ್ ಟೆನಿಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಐಹಿಕಾ-ಸುತೀರ್ಥ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಷ್ಯನ್ ಗೇಮ್ಸ್ 2023 : ಟೇಬಲ್ ಟೆನಿಸ್ ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಐಹಿಕಾ-ಸುತೀರ್ಥ ಜೋಡಿ

ಏಷ್ಯನ್ ಗೇಮ್ಸ್ ನ ಮಹಿಳಾ ಡಬಲ್ಸ್ ಟೇಬಲ್ ಟೆನಿಸ್ ಸೆಮಿಫೈನಲ್ ನಲ್ಲಿ ಭಾರತದ ಸುತೀರ್ಥ ಮುಖರ್ಜಿ ಮತ್ತು ಐಹಿಕಾ ಮುಖರ್ಜಿ ಜೋಡಿ ಉತ್ತರ ಕೊರಿಯಾದ ಚಾ ಸುಯೊಂಗ್ ಮತ್ತು ಪಾಕ್ ಸುಗ್ಯೊಂಗ್ ವಿರುದ್ಧ ಏಳು ಗೇಮ್ಗಳ ರೋಚಕ ಸೋಲನುಭವಿಸಿ ಕಂಚಿನ ಪದಕ ಗೆದ್ದಿದೆ.

ಸುತೀರ್ಥ ಮತ್ತು ಐಹಿಕಾ ಮೊದಲ ಗೇಮ್ ಅನ್ನು 11-7ರಿಂದ ಗೆದ್ದುಕೊಂಡರು, ಆದರೆ ಉತ್ತರ ಕೊರಿಯಾದ ಜೋಡಿ 7-11, 11-8, 7-11, 11-8, 11-9, 5-11, 11-2 ಸೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು.

ಕ್ವಾರ್ಟರ್ ಫೈನಲ್ನಲ್ಲಿ ಭಾರತದ ಜೋಡಿ ಚೀನಾದ ಮೆಂಗ್ ಚೆನ್ ಮತ್ತು ಯಿಡಿ ವಾಂಗ್ ಅವರನ್ನು ಸೋಲಿಸಿ ತಮ್ಮ ದೇಶಕ್ಕೆ ಪದಕವನ್ನು ಖಚಿತಪಡಿಸಿತು. ಈ ಜೋಡಿ 11-5, 11-5, 5-11 ಮತ್ತು 11-9 ಸೆಟ್ ಗಳಿಂದ ಗೆದ್ದು ಸೆಮಿಫೈನಲ್ ಗೆ ಪ್ರವೇಶಿಸಿತು. ಚೀನಾ ಜೋಡಿ ಹಾಲಿ ವಿಶ್ವ ಚಾಂಪಿಯನ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...