
ಹಾಸನ: ಇತ್ತೀಚೆಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಕುಶಾಲನಗರ ಟ್ರಾಫಿಕ್ ಎಎಸ್ಐ ಇದೀಗ ಶವವಾಗಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಟ್ರಾಫಿಕ್ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುರೇಶ್, ಏಕಾಏಕಿ ನಾಪತ್ತೆಯಾಗಿದ್ದರು. ಕುಟುಂಬದವರು ಹಾಗೂ ಪೊಲೀಸರು ಕೂಡ ಸುರೇಶ್ ಗಾಗಿ ಹುಡುಕಾಟ ನಡೆಸಿದ್ದರು. ಆದರೂ ಸುಳಿವಿರಲಿಲ್ಲ.
ಪೂರ್ವಿಕರ ಮನೆಯನ್ನು ಬರೋಬ್ಬರಿ 23 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ ‘ಬಿಗ್ ಬಿ’
ಇದೀಗ ಹಾಸನದ ಕಾಡ್ಲೂರು ಬಳಿಯ ಕಾವೇರಿ ನದಿಯಲ್ಲಿ ಎಎಸ್ಐ ಸುರೇಶ್ ಶವ ಪತ್ತೆಯಾಗಿದೆ. ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.