alex Certify ರಾಜ್ಯದ 12 `ITI’ ಸಂಸ್ಥೆಗಳು 100 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣ : ಸಚಿವ ಡಾ.ಶರಣಪ್ರಕಾಶ ಪಾಟೀಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ 12 `ITI’ ಸಂಸ್ಥೆಗಳು 100 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಣ : ಸಚಿವ ಡಾ.ಶರಣಪ್ರಕಾಶ ಪಾಟೀಲ

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ರಾಯಚೂರು, ಬಳ್ಳಾರಿ ಸೇರಿದಂತೆ ರಾಜ್ಯದಲ್ಲಿ 50 ವರ್ಷಕ್ಕೂ ಹಳೆಯದಾದ 12 ಐ.ಟಿ.ಐ. ಸಂಸ್ಥೆಗಳನ್ನು 100 ಕೋಟಿ ರೂ. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣದ ಜೊತೆ ಸಂಸ್ಥೆಯನ್ನು ಉನ್ನತೀಕರಿಸಲಾಗುತ್ತಿದೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಮಂಗಳವಾರ ಕಲಬುರಗಿ ನಗರದ ಕರ್ನಾಟಕ-ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆ.ಜಿ.ಟಿ.ಟಿ.ಐ)ಗೆ ಭೇಟಿ ನೀಡಿದ ಅವರು, ವಿವಿಧ ಕ್ಯಾಡ್ ಕ್ಯಾಮ್, ಐ.ಟಿ., ಎಲೆಕ್ಟ್ರಿಕಲ್, ಸಿ.ಎನ್.ಸಿ, ಸ್ಲೈಡರ್, ಡಿ.ಟಿ.ಡಿ.ಎಂ, ಟೂಲ್ ರೂಂ ಲ್ಯಾಬ್‍ಗಳನ್ನು ವೀಕ್ಷಿಸಿದಲ್ಲದೆ ತರಬೇತಿದಾರರೊಂದಿಗೆ ಅಲ್ಲಿ ನೀಡಲಾಗುತ್ತಿರುವ ತರಬೇತಿ ಕುರಿತು ಮಾಹಿತಿ ಪಡೆದ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಕಲಬುರಗಿ ಪುರುಷ ಮತ್ತು ಮಹಿಳಾ ಐ.ಟಿ.ಐ. ಸಂಸ್ಥೆಗೂ ಭೇಟಿ ನೀಡಿದ್ದೆ. ಕಲಬುರಗಿ ಪುರುಷ ಸಂಸ್ಥೆ ತುಂಬಾ ಹಳೇಯ ಕಟ್ಟಡವಾಗಿದೆ. ಇಂತಹ ಕಟ್ಟಡಗಳನ್ನು ಉನ್ನತಿಕರಿಸುವ ಯೋಜನೆ ಹೊಂದಲಾಗಿದೆ. ಇದಕ್ಕಾಗಿ 100 ಕೋಟಿ ರೂ. ಅನುದಾನ ಕಾಯ್ದಿರಿಸಿದೆ ಎಂದರು.

ಕಲಬುರಗಿ ಕೆ.ಜಿ.ಟಿ.ಟಿ.ಐ. ಸಂಸ್ಥೆಯಲ್ಲಿ ಪ್ರಸ್ತುತ 1-4 ತಿಂಗಳ ಅವಧಿಯ 13 ಅಲ್ಪಾವಧಿ ಕೋರ್ಸ್ ಜೊತೆಗೆ 3+1 ವರ್ಷದ ಡಿಪ್ಲೋಮಾ ಇನ್ ಟೂಲ್ & ಡೈ ಮೇಕಿಂಗ್ ದೀರ್ಘಾವಧಿ ಕೋರ್ಸಿನ ತರಬೇತಿ ನೀಡಲಾಗುತ್ತಿದೆ. ರಾಜ್ಯದಲ್ಲಿ 6 ಕಡೆ ಈ ಸಂಸ್ಞಥೆಗಳಿದ್ದು, ಕಲಬುರಗಿ ಮತು ಬೆಂಗಳೂರಿನಲ್ಲಿ ಮಾತ್ರ ಕೆ.ಜಿ.ಟಿ.ಟಿ.ಐ ಸಂಸ್ಥೆ ದೊಡ್ಡ ಪ್ರಮಾಣದಲ್ಲಿದೆ. ಇಲ್ಲಿ ಆರಂಭಿಕ ಒಂದು ತರಬೇತಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿರಲಿದೆ. ತದನಂತರ ತರಬೇತಿಗೆ ನಿಗದಿತ ಶುಲ್ಕ ಪಾವತಿಸಬೇಕಾಗುತ್ತದೆ. ಎಸ್.ಸಿ-ಎಸ್.ಟಿ., ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಇತರೆ ಒಂದು ಕೋರ್ಸ್ ಹೆಚ್ಚುವರಿಯಾಗಿ ಉಚಿತ ಪಡೆಯಬಹುದಾಗಿದೆ. ಕಲಬುರಗಿ ಕೆ.ಜಿ.ಟಿ.ಟಿ.ಐ ಸಂಸ್ಥೆಯಲ್ಲಿ ಉತ್ತಮ ಮೂಲಸೌಕರ್ಯ ಇರುವುದರಿಂದ ಸಿ.ಎಂ.ಕೆ.ಕೆ.ವೈ ಯೋಜನೆಯಡಿ ಉದ್ಯೋಗ ನೀಡುವಂತಹ 5 ದೀರ್ಘಾವದಿ ಕೋರ್ಸ್ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ ಎಂದರು.

ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆಯಡಿ ಅಲ್ಪಾವಧಿ ತರಬೇತಿ ಕೋರ್ಸ್ ನೀಡಲು ಹಿಂದೆ ಖಾಸಗಿ ಸಂಸ್ಥೆಗಳಿಗೆ ನೀಡಲಾಗಿತ್ತಾದರು, ಗುಣಮಟ್ಟದ ತರಬೇತಿ ದೊರೆಯುತ್ತಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಸಂಸ್ಥೆಗಳನ್ನೆ ಬಲರ್ವಧನೆ ಮಾಡಿ ಗುಣಮಟ್ಟದ ತರಬೇತಿ ನೀಡಲು ನಿರ್ಧರಿಸಿದೆ. ಸ್ಥಳೀಯವಾಗಿ ಉದ್ಯೋಗ ಬೇಡಿಕೆಗೆ ಅನುಗುಣವಾಗಿ ತರಬೇತಿ ನೀಡುವ ಸಂಬಂಧ ಈಗಾಗಲೆ ಐ.ಟಿ.-ಬಿ.ಟಿ. ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಚರ್ಚಿಸಿರುವೆ. ಉದ್ಯೋಗ ನೀಡುವಂತಹ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ ಎಂದು ಸಚಿವ ಡಾ.ಶರಣಪ್ರಕಶ ಪಾಟೀಲ ತಿಳಿಸಿದರು.

ರಾಜ್ಯದಲ್ಲಿ 180 ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಗಳಿದ್ದು, ಇವುಗಳನ್ನು ಮುಂದಿನ ಒಂದು ವರ್ಷದಲ್ಲಿ ಸುಸಜ್ಜಿತ ಕಟ್ಟಡವಾಗಿರುವಂತೆ ಬಲವರ್ಧನೆ ಮಾಡಲಾಗುವುದು ಎಂದು ಸಚಿವರು ಇದೇ ಸಂರ್ಭದಲ್ಲಿ ತಿಳಿಸಿದರು.

ಜಿ.ಟಿ.ಟಿ.ಸಿ.ಯಲ್ಲಿ 5 ದೀರ್ಘಾವಧಿ ಕೋರ್ಸ್ ಆರಂಭಕ್ಕೆ ಕ್ರಮ :

ಕಲಬುರಗಿ ಸೇರಿದಂತೆ ರಾಜ್ಯದ 33 ಜಿ.ಟಿ.ಟಿ.ಸಿ ತರಬೇತಿ ಕೇಂದ್ರದಲ್ಲಿ ಪ್ರಸ್ತುತ 2 ದೀರ್ಘಾವಧಿ ಕೋರ್ಸ್ ಮಾತ್ರ ತರಬೇತಿ ನೀಡುತ್ತಿದ್ದು, ಮುಂದಿನ 2 ವರ್ಷದಲ್ಲಿ  5 ಕೋರ್ಸಿಗೆ ಹೆಚ್ಚಿಸಲಾಗುವುದು. ಜಿ.ಟಿ.ಟಿ.ಸಿ.ಯಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಶೇ.100ರಷ್ಟು ಉದ್ಯೋಗ ಸಿಗುತ್ತಿದೆ. ಪ್ರಸಕ್ತ 2023-24 ವರ್ಷದಿಂದಲೇ ಕೆ.ಇ.ಎ. ಮೂಲಕ ಪಾರದರ್ಶಕವಾಗಿ ಮೆರಿಟ್ ಆಧಾರದ ಮೇಲೆ ಈ ಕೇಂದ್ರಗಳೀಗೆ ಪ್ರವೇಶಾತಿ ನೀಡಲಾಗಿದೆ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾಹಿತಿ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...