
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾರ ಮುದ್ದಿನ ಪುತ್ರಿಯರಾದ ಮಲಿಯಾ ಹಾಗೂ ಸಶಾ ಒಬಾಮಾ ತಮ್ಮ ಹಿಂದೆ ಬೀಳುವ ಮಾಧ್ಯಮದ ಕಣ್ಣುಗಳನ್ನು ಬಹಳ ಗಂಭೀರವಾಗಿ ಹಾಗೂ ಜಾಣ್ಮೆಯಿಂದ ನಿಭಾಯಿಸಿಕೊಂಡು ಬಂದಿದ್ದಾರೆ. ಇಷ್ಟೆಲ್ಲಾ ಆದರೂ ಮಾಜಿ ಅಧ್ಯಕ್ಷರ ಮಕ್ಕಳೆಂದ ಮೇಲೆ ಅವರ ವೈಯಕ್ತಿಕ ಜೀವನಗಳ ಮೇಲೆ ಬಹಳಷ್ಟು ಕಣ್ಣುಗಳು ನೆಟ್ಟೇ ಇರುತ್ತವೆ.
ಒಬಾಮಾ ಹಿರಿಯ ಪುತ್ರಿ ಮಲಿಯಾ ಜುಲೈ 4ರಂದು 23ನೇ ವಯಸ್ಸಿಗೆ ಕಾಲಿಟ್ಟದ್ದಾರೆ. ಇದೇ ವೇಳೆ ಅವರು 2017ರಿಂದ ಬ್ರಿಟೀಷ್ ಮೂಲದ ರಾರಿ ಫಾರ್ಕುಹಾರ್ಸನ್ ಎಂಬಾನೊಂದಿಗೆ ಸಂಬಂಧದಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಗೆಳೆಯರೊಂದಿಗೆ ಶಿಕಾರಿಗೆ ಹೋದ ಯುವಕ ಗುಂಡೇಟಿಗೆ ಬಲಿ
2017ರಲ್ಲಿ ಹಾರ್ವಡ್ ಮತ್ತು ಯೇಲ್ ಅಮೆರಿಕನ್ ಫುಟ್ಬಾಲ್ ಪಂದ್ಯವೊಂದರ ವೇಳೆ ವೀಕ್ಷಕರ ಗ್ಯಾಲರಿಯಲ್ಲಿ ಮೊದಲ ಬಾರಿಗೆ ಕಂಡಿದ್ದ ಈ ಜೋಡಿ ಈಗ ಸುದ್ದಿಯಲ್ಲಿದೆ. ಇಬ್ಬರು ಹಾರ್ವಡ್‌ನಲ್ಲಿ ಅಧ್ಯಯನ ಮಾಡುತ್ತಿದ್ದ ವೇಳೆ ಪರಿಚಯವಾಗಿದ್ದಾರೆ.
ರಾರಿ ತಂದೆ ಚಾರ್ಲ್ಸ್ ಫರ್ಕುಹಾರ್ಸನ್ ಲಂಡನ್ ಮೂಲದ ಇನ್‌ಸೈಟ್ ಇನ್ವೆಸ್ಟ್‌ಮೆಂಟ್ ಮ್ಯಾನೇಜ್ಮೆಂಟ್ ಲಿನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು, ಆತನ ತಾಯಿ ಲಂಡನ್‌ನ ಅಪ್ಪರ್ ಟ್ರಿಬ್ಯೂನಲ್‌ನಲ್ಲಿ ಲೆಕ್ಕಿಗರಾಗಿದ್ದಾರೆ. ರಾರಿಯ ಕುಟುಂಬವು ಸಫ್ಫೋಕ್‌ನ ವುಡ್‌ಬ್ರಿಡ್ಜ್‌ನಲ್ಲಿ $2.2 ದಶಲಕ್ಷ ಮೌಲ್ಯದ ಬಂಗಲೆ ಹೊಂದಿದೆ.
ಜೂನ್ 18, 1998ರಲ್ಲಿ ಜನಿಸಿದ ರಾರಿ ರಗ್ಬಿ ಆಟಗಾರನಾಗಿದ್ದು, 2015ರಲ್ಲಿ ಯುವರಾಜ ಹ್ಯಾರಿಯೊಂದಿಗೆ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದರು.