alex Certify ಈ ಸೆಲೆಬ್ರಿಟಿಗಳು ಇನ್ನೂ ಜೀವಂತವಾಗಿದ್ದಿದ್ದರೆ ಹೇಗೆ ಕಾಣುತ್ತಿದ್ದರು ? ಇಲ್ಲಿದೆ ಇಂಟ್ರಸ್ಟಿಂಗ್‌ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸೆಲೆಬ್ರಿಟಿಗಳು ಇನ್ನೂ ಜೀವಂತವಾಗಿದ್ದಿದ್ದರೆ ಹೇಗೆ ಕಾಣುತ್ತಿದ್ದರು ? ಇಲ್ಲಿದೆ ಇಂಟ್ರಸ್ಟಿಂಗ್‌ ಫೋಟೋ

ಮೈಕೆಲ್​ ಜಾಕ್ಸನ್​ ಅಥವಾ ಜಾನ್​ ಲೆನ್ನನ್​ ಇಂದು ಬದುಕಿದ್ದರೆ ಅವರು ಹೇಗಿರುತ್ತಿದ್ದರು ಎಂದು ಎಂದಾದರೂ ಊಹಿಸಿದ್ದೀರಾ‌ ? ಟಕಿರ್ ಮೂಲದ ಛಾಯಾಗ್ರಾಹಕರೊಬ್ಬರು ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ (ಎಐ) ತಂತ್ರಜ್ಞಾನ ಬಳಸಿಕೊಂಡು ಕೆಲವು ಸೆಲೆಬ್ರಿಟಿಗಳ ಚಿತ್ರಗಳನ್ನು ಅವರು ಈಗ ಬದುಕಿರುತ್ತಿದ್ದರೆ ಹೇಗಿರುತ್ತಿದ್ದರು ಎಂದು ವಾಸ್ತವಿಕ ಚಿತ್ರ ರಚಿಸಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಅಲೆ ಎಬ್ಬಿಸಿದೆ.

ಆಲ್ಪರ್​ ಯೆಸಿಲ್ಟಾಸ್,​ ಛಾಯಾಗ್ರಾಹಕ ಮತ್ತು ವಕೀಲ ವೃತ್ತಿಯಲ್ಲಿ ತೊಡಗಿದ್ದಾರೆ. ಈ ಪ್ರಾಜೆಕ್ಟ್ ಅನ್ನು ಯಾಸ್​ ಇ​ ನಥಿಂಗ್​ ಹ್ಯಾಪನ್​ ಎಂದು ಕರೆದಿದ್ದಾರೆ. ಈ ಪ್ರಾಜೆಕ್ಟ್​ನಡಿ ಪ್ರಿನ್ಸೆಸ್​ ಡಯಾನಾ, ಫ್ರೆಡ್ಡಿ ಮಕ್ಯುರ್ರಿ, ಹೀತ್​ ಲೆಡ್ಜರ್​, ಜಾನ್​ ಲೆನ್ನನ್​, ಬ್ರೂಸ್​ ಲೀ ಮುಂತಾದ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ರಚಿಸಿದ್ದಾರೆ.

ಅವರು ಈಗ ಬದುಕಿರುತ್ತಿದ್ದರೆ ಹೇಗಿರಬಹುದು ಎಂಬುದನ್ನು ತೋರಿಸುವುದು ಅವರ ಉದ್ದೇಶ. ಅವರ ಹೈಪರ್​ ರಿಯಲಿಸ್ಟಿಕ್​ ಕಲ್ಪನೆ ಸಹಜವಾಗಿ ಆಶ್ಚರ್ಯ ತರುತ್ತದೆ, 1997 ರಲ್ಲಿ ನಡೆದ ಆ ಭೀಕರ ಕಾರು ಅಪಘಾತದಲ್ಲಿ ಅವರು ಸಾಯದಿದ್ದರೆ ಇಂದು ಪ್ರೀತಿಯ ಜನರ ರಾಜಕುಮಾರಿ ಲೇಡಿ ಡಯಾನಾ ಹೇಗೆ ಕಾಣುತ್ತಿದ್ದರು ಎಂಬ ಶೀರ್ಷಿಕೆ ಇದೆ.

ಅದೇ ರೀತಿ, ಗಾಯಕರಾದ ಎಲ್ವಿಸ್​ ಪ್ರೀಸ್ಲಿ ಅವರು 1977 ರಲ್ಲಿ 42 ನೇ ವಯಸ್ಸಿನಲ್ಲಿ ಅಕಾಲಿಕವಾಗಿ ಸಾಯದಿದ್ದರೆ ಅವರ ವೃದ್ಧಾಪ್ಯದಲ್ಲಿ ಯಾವ ರೀತಿ ಕಾಣುತ್ತಿದ್ದರು.

Princess Diana

ಗಾಯಕ, ನೃತ್ಯಗಾರ, ಪ್ರದರ್ಶಕ ಮೈಕೆಲ್​ ಜಾಕ್ಸನ್​ 2010 ರಲ್ಲಿ ತೀರಾ ಬೇಗ ನಿಧನರಾದರು, ಅವರು ತಮ್ಮ ವಯಸ್ಸಾದ ವಯಸ್ಸಿನಲ್ಲಿ ಕಾಣುತ್ತಿದ್ದರೆಂದು ಕಲ್ಪನೆ ಮಾಡಿಕೊಳ್ಳಬಹುದು. ಅದೇ ರೀತಿ ಇತರ ಸೆಲಬ್ರಿಟಿಗಳ ಬಗ್ಗೆ ಹೈಪರ್​ ರಿಯಲಿಸ್ಟಿಕ್​ ಕಲ್ಪನೆಯನ್ನು ಆ ಕಲಾವಿದ ಕಟ್ಟಿಕೊಟ್ಟಿದ್ದಾರೆ.

Elvis Presley
Michael Jackson
Heath Ledger
Bruce Lee

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...