
ಆಲ್ಪರ್ ಯೆಸಿಲ್ಟಾಸ್, ಛಾಯಾಗ್ರಾಹಕ ಮತ್ತು ವಕೀಲ ವೃತ್ತಿಯಲ್ಲಿ ತೊಡಗಿದ್ದಾರೆ. ಈ ಪ್ರಾಜೆಕ್ಟ್ ಅನ್ನು ಯಾಸ್ ಇ ನಥಿಂಗ್ ಹ್ಯಾಪನ್ ಎಂದು ಕರೆದಿದ್ದಾರೆ. ಈ ಪ್ರಾಜೆಕ್ಟ್ನಡಿ ಪ್ರಿನ್ಸೆಸ್ ಡಯಾನಾ, ಫ್ರೆಡ್ಡಿ ಮಕ್ಯುರ್ರಿ, ಹೀತ್ ಲೆಡ್ಜರ್, ಜಾನ್ ಲೆನ್ನನ್, ಬ್ರೂಸ್ ಲೀ ಮುಂತಾದ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ರಚಿಸಿದ್ದಾರೆ.
ಅವರು ಈಗ ಬದುಕಿರುತ್ತಿದ್ದರೆ ಹೇಗಿರಬಹುದು ಎಂಬುದನ್ನು ತೋರಿಸುವುದು ಅವರ ಉದ್ದೇಶ. ಅವರ ಹೈಪರ್ ರಿಯಲಿಸ್ಟಿಕ್ ಕಲ್ಪನೆ ಸಹಜವಾಗಿ ಆಶ್ಚರ್ಯ ತರುತ್ತದೆ, 1997 ರಲ್ಲಿ ನಡೆದ ಆ ಭೀಕರ ಕಾರು ಅಪಘಾತದಲ್ಲಿ ಅವರು ಸಾಯದಿದ್ದರೆ ಇಂದು ಪ್ರೀತಿಯ ಜನರ ರಾಜಕುಮಾರಿ ಲೇಡಿ ಡಯಾನಾ ಹೇಗೆ ಕಾಣುತ್ತಿದ್ದರು ಎಂಬ ಶೀರ್ಷಿಕೆ ಇದೆ.
ಅದೇ ರೀತಿ, ಗಾಯಕರಾದ ಎಲ್ವಿಸ್ ಪ್ರೀಸ್ಲಿ ಅವರು 1977 ರಲ್ಲಿ 42 ನೇ ವಯಸ್ಸಿನಲ್ಲಿ ಅಕಾಲಿಕವಾಗಿ ಸಾಯದಿದ್ದರೆ ಅವರ ವೃದ್ಧಾಪ್ಯದಲ್ಲಿ ಯಾವ ರೀತಿ ಕಾಣುತ್ತಿದ್ದರು.
ಗಾಯಕ, ನೃತ್ಯಗಾರ, ಪ್ರದರ್ಶಕ ಮೈಕೆಲ್ ಜಾಕ್ಸನ್ 2010 ರಲ್ಲಿ ತೀರಾ ಬೇಗ ನಿಧನರಾದರು, ಅವರು ತಮ್ಮ ವಯಸ್ಸಾದ ವಯಸ್ಸಿನಲ್ಲಿ ಕಾಣುತ್ತಿದ್ದರೆಂದು ಕಲ್ಪನೆ ಮಾಡಿಕೊಳ್ಳಬಹುದು. ಅದೇ ರೀತಿ ಇತರ ಸೆಲಬ್ರಿಟಿಗಳ ಬಗ್ಗೆ ಹೈಪರ್ ರಿಯಲಿಸ್ಟಿಕ್ ಕಲ್ಪನೆಯನ್ನು ಆ ಕಲಾವಿದ ಕಟ್ಟಿಕೊಟ್ಟಿದ್ದಾರೆ.



