alex Certify ರಸ್ತೆ ಮೇಲೆ ಪುಟ್ಟ ಹುಡುಗನ ಸ್ಟಂಟ್; ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆ ಮೇಲೆ ಪುಟ್ಟ ಹುಡುಗನ ಸ್ಟಂಟ್; ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ಸಾಮಾಜಿಕ ಜಾಲ ತಾಣದಲ್ಲಿ ಭಾರತೀಯ ಪ್ರತಿಭೆಗಳನ್ನು ಶ್ಲಾಘಿಸಲು ಮತ್ತು ಪ್ರಚಾರ ಮಾಡಲು ಹೆಸರುವಾಸಿ. ಅವರು ಇದೀಗ ಹಂಚಿಕೊಂಡ ಇತ್ತೀಚಿನ ವಿಡಿಯೋದಲ್ಲಿ, ಚಿಕ್ಕ ಹುಡುಗ ರಸ್ತೆಯೊಂದರಲ್ಲಿ ತನ್ನ ಚಮತ್ಕಾರಿಕ ಕೌಶಲ್ಯ ತೋರಿಸುತ್ತಿರುವುದನ್ನು ಕಾಣಬಹುದು.

ವೈರಲ್ ಆದ ಕ್ಲಿಪ್‌ನಲ್ಲಿ, ಹುಡುಗ ಅನೇಕ ಹಿಮ್ಮುಖ ಪಲ್ಟಿಗಳನ್ನು ಮಾಡುತ್ತಾನೆ ಮತ್ತು ಕೊನೆಯಲ್ಲಿ, ಅವನು ಟ್ವಿಸ್ಟ್ ಫ್ಲಿಪ್ ಮಾಡುತ್ತಾನೆ. ಮುಖ್ಯವಾಗಿ ಸರಾಗವಾಗಿ ಲ್ಯಾಂಡ್ ಮಾಡುತ್ತಾನೆ. ಇದೆಲ್ಲ ಮಾಡಿದ್ದು‌ ಜನನಿಬಿಡ ರಸ್ತೆ ಮೇಲೆ ಎಂಬುದು ಕುತೂಹಲಕಾರಿ ಸಂಗತಿ.

ಆನಂದ್ ಮಹೀಂದ್ರಾ ಆ ಹುಡುಗನ ಪ್ರತಿಭೆಯಿಂದ ಸಾಕಷ್ಟು ಆಶ್ಚರ್ಯಚಕಿತರಾಗಿದ್ದಾರೆ. “ಕಾಮನ್ ವೆಲ್ತ್ 2022 ನಲ್ಲಿ ಭಾರತಕ್ಕೆ ಸಾಕಷ್ಟು ಚಿನ್ನದ ಪದಕ‌ ಬಂದಿದ್ದು, ಮುಂದಿನ ಪೀಳಿಗೆಯ ಪ್ರತಿಭೆಗಳು ರೂಪುಗೊಳ್ಳುತ್ತಿವೆ. ಈ ಪ್ರತಿಭೆಯನ್ನು ನಾವು ಹಾದಿಯಲ್ಲಿ ತರಬೇಕು” ಎಂದು ಶೀರ್ಷಿಕೆ ನೀಡಿದ್ದಾರೆ.

ತಿರುನೆಲ್ವೇಲಿ ಸಮೀಪದ ಹಳ್ಳಿಯಲ್ಲಿ ಈ ಹುಡುಗನನ್ನು ನೋಡಿದವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಮೈಕ್ರೋ- ಬ್ಲಾಗಿಂಗ್ ಸೈಟ್‌ನಲ್ಲಿ ಆ ಹುಡುಗನನ್ನು ಬೆಂಬಲಿಸುವ ಅನೇಕ ವಿಮರ್ಶೆ ಪೋಸ್ಟ್ ಬಂದಿದ್ದು, ಕೆಲವರು ಹುಡುಗನಿಗೆ ಸಹಾಯ ಮಾಡುವಂತೆ ಮಹಿಂದ್ರಾಗೆ ಕೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...