alex Certify ಪೈಲಟ್ ಜೊತೆ ನಟ ರಾಜ್‌ ಬಬ್ಬರ್‌ ಪುತ್ರನ ವಾಗ್ವಾದ; ಹಳೆ ವಿಡಿಯೋ ಪೋಸ್ಟ್‌ ಮಾಡಿದ ಆರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೈಲಟ್ ಜೊತೆ ನಟ ರಾಜ್‌ ಬಬ್ಬರ್‌ ಪುತ್ರನ ವಾಗ್ವಾದ; ಹಳೆ ವಿಡಿಯೋ ಪೋಸ್ಟ್‌ ಮಾಡಿದ ಆರ್ಯ

ಹಿರಿಯ ನಟ ಮತ್ತು ರಾಜಕಾರಣಿ ರಾಜ್ ಬಬ್ಬರ್ ಅವರ ಪುತ್ರ ಆರ್ಯ ಬಬ್ಬರ್ ಹಾಗೂ ಗೋಫಸ್ಟ್ ವಿಮಾನ ಸಂಸ್ಥೆಯ ಪೈಲಟ್ ನಡುವೆ ಜೋಕ್ ವಿಚಾರವಾಗಿ ತೀವ್ರ ವಾಗ್ವಾದ ನಡೆದಿದೆ. ಈ ಘಟನೆ ನಡೆದು ಹಲವು ದಿನಗಳಾಗಿದ್ದು, ಸ್ವತಃ ಆರ್ಯ ಈ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಂತರ ಬೆಳಕಿಗೆ ಬಂದಿದೆ.

ಈ ಕುರಿತ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ವಿಮಾನದ ಕಾಕ್ ಪಿಟ್ ನಲ್ಲೆ ಪೈಲಟ್‌ನೊಂದಿಗೆ ಜಗಳವಾಡುತ್ತಿದ್ದಾರೆ. ನೀವು ‘ಯೇ ಕ್ಯಾ ಚಲಾಯೇಗಾ’ ಎಂದು ಹೇಳುವುದನ್ನು ನಾನು ಕೇಳಿದೆ ಅದು ನನಗೆ ಇಷ್ಟವಾಗಲಿಲ್ಲ ಎಂಬುದಾಗಿ ಪೈಲಟ್​ ಅವರು ನಟ ಆರ್ಯ ಜೋಕ್​ ಮಾಡಿದ್ದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಅದೃಷ್ಟಲಕ್ಷ್ಮಿʼ ಒಲಿಯಬೇಕೆಂದರೆ ಇವುಗಳನ್ನು ಪಾಲಿಸಿ

ಇದಕ್ಕೆ ಪ್ರತಿಕ್ರಿಯಿಸಿದ ನಟ ಆರ್ಯ, ನಾನು ಆ ರೀತಿ ಹೇಳಿದ್ದಲ್ಲ. ನಾನು ನನ್ನ ಸ್ನೇಹಿತನ ಕುರಿತು ಜೋಕ್ ಮಾಡಿದ್ದೇನೆ ಎಂದ ಅವರು, ‘ಭಾಯ್ ಯೇ ಅಭಿ ಆಯೆ ಹೈ?’ ಎಂದು ಘಟನೆಯಿಂದ ಕೆರಳಿ ಮಾತನಾಡಿದ್ದಾರೆ. ಅಲ್ಲದೇ, ಘಟನೆಯಿಂದ ಸಿಟ್ಟಿಗೆದ್ದ ಅವರು ನಂತರ ಪೈಲಟ್‌ಗೆ ತಮಾಷೆ ಮಾಡಲು ಇಲ್ಲಿ ಅವಕಾಶವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆರ್ಯ ಪರ ನಿಂತಿದ್ದಾರೆ.

ಇಂತಹದ್ದೇ ಮತ್ತೊಂದು ವಿಚಾರವಾಗಿ ನಟಿ ಚಿತ್ರಾಂಗದ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಸ್ಟೋರಿಸ್ ವಿಭಾಗದಲ್ಲಿ ಗೋ ಫಸ್ಟ್ ವಿಮಾನ ಸಂಸ್ಥೆಯ ಗಗನಸಖಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಇಲ್ಲಿನ ಗಗನಸಖಿಯರಿಗೆ ಪ್ರಯಾಣಿಕರನ್ನು ಹೇಗೆ ನೋಡಿಕೊಳ್ಳಬೇಕು ಎಂಬ ಸಾಮಾನ್ಯ ಜ್ಞಾನವಿಲ್ಲ. ನನ್ನ ಪಕ್ಕ ಕುಳಿತಿದ್ದ ಪ್ರಯಾಣಿಕರೊಂದಿಗೆ ಒರಟಾಗಿ ವರ್ತಿಸಿದ್ದಲ್ಲದೆ, ಅಹಂಕಾರ ತೋರಿಸಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ದಾರೆ. ‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...