alex Certify ತಮಿಳುನಾಡಿನ ಸೈನಿಕ ಜೊತೆ ಅರುಣಾಚಲ ವೈದ್ಯರಿಂದ ತಮಿಳಲ್ಲಿ ಚರ್ಚೆ, ಅಚ್ಚರಿಪಟ್ಟ ಪೇಮಾ ಖಂಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮಿಳುನಾಡಿನ ಸೈನಿಕ ಜೊತೆ ಅರುಣಾಚಲ ವೈದ್ಯರಿಂದ ತಮಿಳಲ್ಲಿ ಚರ್ಚೆ, ಅಚ್ಚರಿಪಟ್ಟ ಪೇಮಾ ಖಂಡು

ಭಾರತ ವೈವಿಧ್ಯಮಯ ರಾಷ್ಟ್ರ, ಬೆರಗುಗೊಳಿಸುವ ಭಾಷೆಗಳನ್ನು ಹೊಂದಿ ಗುಚ್ಛ. ಪ್ರತಿಯೊಂದು ರಾಜ್ಯ ಮತ್ತು ಪ್ರದೇಶವು ತನ್ನದೇ ಆದ ಸ್ಥಳೀ ಯ ಭಾಷೆಯನ್ನು ಹೊಂದಿದೆ, ಒಬ್ಬ ವ್ಯಕ್ತಿಯು ಎಲ್ಲವನ್ನೂ ಕಲಿಯಲು ಮತ್ತು ಅರ್ಥ ಮಾಡಿಕೊಳ್ಳಲು ಅಸಾಧ್ಯ. ಹಾಗಾದರೆ ಅರುಣಾಚಲ ಪ್ರದೇಶದವರು ಮತ್ತು ತಮಿಳಿಗರು ಭೇಟಿಯಾದರೆ ಏನಾಗುತ್ತದೆ? ಅವರಿಗೆ ಒಂದು ಪದವೂ ಅರ್ಥವಾಗದಿರುವ ಸಾಧ್ಯತೆಗಳಿವೆ.

ಆದರೆ, ಅರುಣಾಚಲದ ವೈದ್ಯರೊಬ್ಬರು ಮದ್ರಾಸ್​ ರೆಜಿಮೆಂಟ್​ನ ಜವಾನನನ್ನು ನಿರರ್ಗಳವಾಗಿ ತಮಿಳು ಮಾತನಾಡುವ ಮೂಲಕ ಆಶ್ಚರ್ಯಚಕಿತರಾದರು. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಬುಧವಾರ ತಮ್ಮ ನಡುವೆ ನಡೆದ ವಿಶೇಷ ಸಂಭಾಷಣೆಯ ವೀಡಿಯೊವನ್ನು ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರನ್ನು ಖುಷಿಪಡಿಸಿದೆ.

ತವಾಂಗ್​ನ ಟಿಬೆಟ್​ ಗಡಿಯ ಸಮೀಪವಿರುವ ಒಮ್ತಾಂಗ್​ನಲ್ಲಿ ಭೇಟಿಯಾದಾಗ ಡಾ. ಲಾಮ್​ ದೋಜಿರ್ ಅಲ್ಲಿದ್ದ ಜವಾನರೊಂದಿಗೆ ನಿರರ್ಗಳವಾಗಿ ತಮಿಳಿನಲ್ಲಿ ಮಾತನಾಡುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದಾಗಿದೆ.

ಗಮನಾರ್ಹವೆಂದರೆ, ಅವರು ತಮಿಳುನಾಡಿನಲ್ಲಿ ಹಲವಾರು ವರ್ಷಗಳ ಕಾಲ ವೈದ್ಯಕಿಯ ಅಧ್ಯಯನ ಮಾಡಿದ ನಂತರ ತಮಿಳು ಕಲಿತರು. ಖಂಡು ವೀಡಿಯೊವನ್ನು ಹಂಚಿಕೊಂಡು, ಡಾ ಲ್ಹಾಮ್​ ದೋಜಿರ್ ಅವರು ತಮಿಳುನಾಡಿನಲ್ಲಿ ವೆೈದ್ಯಕೀಯ ಅಧ್ಯಯನ ಮಾಡಿದರು. ಮದ್ರಾಸ್​ ರೆಜಿಮೆಂಟಿನ ಜವಾನನೊಬ್ಬನೊಂದಿಗೆ ನಿರರ್ಗಳವಾಗಿ ತಮಿಳಿನಲ್ಲಿ ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದರು. ಅವರು ತವಾಂಗ್​ನ ಟಿಬೆಟ್​ ಗಡಿಯ ಬಳಿಯ ಒಮ್ತಾಂಗ್​ನಲ್ಲಿ ಭೇಟಿಯಾದರು. ನಿಜವಾದ ರಾಷ್ಟ್ರೀಯ ಏಕೀಕರಣಕ್ಕೆ ಎಂತಹ ಉದಾಹರಣೆ! ನಮ್ಮ ಭಾಷಾ ವೆೈವಿಧ್ಯತೆಯ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಬರೆದುಕೊಂಡಿದ್ದಾರೆ.

ಇದನ್ನು ಕಂಡ ನೆಟ್ಟಿಗರು ಕಾಮೆಂಟ್​ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿ, ಭಾಷಾ ವೈವಿದ್ಯತೆ ಕುರಿತ ಅಭಿಪ್ರಾಯವನ್ನು ಕೊಂಡಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...