ಮಕ್ಕಳೊಂದಿಗೆ ತಾವು ನೃತ್ಯ ಮಾಡುತ್ತಿರುವ ಸುಂದರ ವಿಡಿಯೋವೊಂದನ್ನು ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖಂಡು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಕ್ಲಿಪ್ಗೆ ಅಂತರ್ಜಾಲದಲ್ಲಿ ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ಸಿಕ್ಕಿವೆ.
“ಇದು ನಮ್ಮ ಅರುಣಾಚಲ…
ವರ್ಣಮಯ, ಸಂತಸಮಯ, ಉಲ್ಲಾಸಮಯ ಹಾಗೂ ಜೀವನೋತ್ಸಾಹಭರಿತವಾದದ್ಧು.
BIG NEWS: ಬಿಡಿಎ ಕಚೇರಿ ಮೇಲೆ ACB ಮುಂದುವರೆದ ಶೋಧ; ಎಸ್.ಆರ್ ವಿಶ್ವನಾಥ್ ಹೇಳಿದ್ದೇನು?
ಪಶ್ಚಿಮ ಕಾಮೆಂಗ್ ಜಿಲ್ಲೆಯ ಖಜಲಾಂಗ್ ಗ್ರಾಮದ ಮುದ್ದಾದ ಮಕ್ಕಳಿಂದ ಸಾಂಪ್ರದಾಯಿಕ ನೃತ್ಯ,” ಎಂದು ಖಂಡು ಟ್ವೀಟ್ ಮಾಡಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿಗಳು ಬುಧವಾರ ಈ ವಿಡಿಯೋ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ 2,000ಕ್ಕೂ ಹೆಚ್ಚಿನ ಲೈಕ್ಸ್ ಗಿಟ್ಟಿಸಿದೆ. ಮಕ್ಕಳೊಂದಿಗೆ ಮಗುವಾಗಿರುವ ಖಂಡುರನ್ನು ನೆಟ್ಟಿಗರು ಮೆಚ್ಚಿ ಮಾತನಾಡಿದ್ದಾರೆ.