alex Certify ಜಲಪಾತದ ಸುಂದರ ನೋಟವನ್ನು ಹಂಚಿಕೊಂಡ ಅರುಣಾಚಲ ಸಿಎಂ, ಪ್ರವಾಸಿಗರಿಗೆ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಲಪಾತದ ಸುಂದರ ನೋಟವನ್ನು ಹಂಚಿಕೊಂಡ ಅರುಣಾಚಲ ಸಿಎಂ, ಪ್ರವಾಸಿಗರಿಗೆ ಆಹ್ವಾನ

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಭಾನುವಾರ ತಮ್ಮ ಅಧಿಕೃತ ಟ್ವಿಟರ್​ ಹ್ಯಾಂಡಲ್​ನಲ್ಲಿ ಯಮೆಂಗ್​ ಜಲಪಾತದ ರೋಮಾಂಚಕಾರಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಎತ್ತರದ ಸುಲುಂಗ್ಟಿ ಪರ್ವತ ಸಾಲು ಮತ್ತು ಮರಗಳಿಂದ ಆವೃತವಾಗಿರುವ ಯಮೆಂಗ್​ ಜಲಪಾತದ ಭವ್ಯವಾದ ನೋಟವನ್ನು ವೀಡಿಯೊದಲ್ಲಿ ನೋಡಬಹುದು.

ಮಾಗೊ ಮತ್ತು ತವಾಂಗ್​ ನಡುವೆ ಇರುವ ಈ ಜಲಪಾತವು 108 ಜಲಪಾತಗಳ ಗುಂಪಿನ ಚುಮಿ ಗ್ಯಾಟ್ಸೆ ಜಲಪಾತದ ಭಾಗವಾಗಿದೆ ಎಂದು ವೀಡಿಯೊದಲ್ಲಿನ ವಿವರಣೆಯಲ್ಲಿ ತಿಳಿಸಲಾಗಿದೆ.

ಪ್ರಕೃತಿಯ ವೈಭವ ಅಲ್ಲಿ ಎದ್ದು ಕಾಣಿಸುವ 93 ಸೆಕೆಂಡ್​ಗಳ ವೀಡಿಯೊವನ್ನು ಹಂಚಿಕೊಂಡಿರುವ ಖಂಡು ವೀಡಿಯೊಗೆ ಶೀಷಿರ್ಕೆ ನೀಡಿದ್ದಾರೆ, ಯಾಮೆಂಗ್​ ಜಲಪಾತವು ಸರಳವಾಗಿ ಭವ್ಯವಾಗಿದೆ, ಅದ್ಭುತವಾಗಿದೆ! ತವಾಂಗ್​ನಿಂದ ಮಾಗೊಗೆ ಪ್ರಯಾಣಿಸುವಾಗ ನೀವು ಈ ಸ್ಥಳವನ್ನು ತಲುಪಬಹುದು. ಹಸಿರಿನಿಂದ ಕೂಡಿದ ಆ ಪ್ರದೇಶದ ಆಕರ್ಷಕ ಮೋಡಿ ನಿಮ್ಮ ಕಲ್ಪನೆಗೂ ಮೀರಿ ನಿಮ್ಮನ್ನು ಆಕಷಿರ್ಸುತ್ತದೆ. ಪ್ರಕೃತಿಯ ವೈಭವವನ್ನು ಆನಂದಿಸಲು ಭೇಟಿ ನೀಡಿ ಎಂದು ಆಹ್ವಾನ ನೀಡಿದ್ದಾರೆ.

ಕಳೆದ ವರ್ಷ ಅರುಣಾಚಲ ಪ್ರದೇಶದ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು ‘ದೇಖೋ ಅಪ್ನಾ ಪ್ರದೇಶ’ ಅಭಿಯಾನವನ್ನು ಪ್ರಾರಂಭಿಸಲಾಯಿತು.
ಮುಖ್ಯಮಂತ್ರಿ ಪೆಮಾ ಖಂಡು ಅವರು ತಮ್ಮ ರಾಜ್ಯದ ಅನ್​ ಎಕ್ಸ್​ಪ್ಲೋರ್​ ಸೌಂದರ್ಯವನ್ನು ವಿವರಿಸುವ ಅದ್ಭುತ ಚಿತ್ರಗಳು ಮತ್ತು ವೀಡಿಯೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ರಾಜ್ಯದ ತವಾಂಗ್​ ಜಿಲ್ಲೆಯ ಬೇಘರ್​ ಗ್ರಾಮದ ವೀಡಿಯೊವನ್ನು ಹಂಚಿಕೊಂಡಿದ್ದರು.

— Pema Khandu པདྨ་མཁའ་འགྲོ་། (@PemaKhanduBJP) October 9, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...