ಜಲಪಾತದ ಸುಂದರ ನೋಟವನ್ನು ಹಂಚಿಕೊಂಡ ಅರುಣಾಚಲ ಸಿಎಂ, ಪ್ರವಾಸಿಗರಿಗೆ ಆಹ್ವಾನ 12-10-2022 11:42AM IST / No Comments / Posted In: Latest News, India, Live News ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಭಾನುವಾರ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಯಮೆಂಗ್ ಜಲಪಾತದ ರೋಮಾಂಚಕಾರಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಎತ್ತರದ ಸುಲುಂಗ್ಟಿ ಪರ್ವತ ಸಾಲು ಮತ್ತು ಮರಗಳಿಂದ ಆವೃತವಾಗಿರುವ ಯಮೆಂಗ್ ಜಲಪಾತದ ಭವ್ಯವಾದ ನೋಟವನ್ನು ವೀಡಿಯೊದಲ್ಲಿ ನೋಡಬಹುದು. ಮಾಗೊ ಮತ್ತು ತವಾಂಗ್ ನಡುವೆ ಇರುವ ಈ ಜಲಪಾತವು 108 ಜಲಪಾತಗಳ ಗುಂಪಿನ ಚುಮಿ ಗ್ಯಾಟ್ಸೆ ಜಲಪಾತದ ಭಾಗವಾಗಿದೆ ಎಂದು ವೀಡಿಯೊದಲ್ಲಿನ ವಿವರಣೆಯಲ್ಲಿ ತಿಳಿಸಲಾಗಿದೆ. ಪ್ರಕೃತಿಯ ವೈಭವ ಅಲ್ಲಿ ಎದ್ದು ಕಾಣಿಸುವ 93 ಸೆಕೆಂಡ್ಗಳ ವೀಡಿಯೊವನ್ನು ಹಂಚಿಕೊಂಡಿರುವ ಖಂಡು ವೀಡಿಯೊಗೆ ಶೀಷಿರ್ಕೆ ನೀಡಿದ್ದಾರೆ, ಯಾಮೆಂಗ್ ಜಲಪಾತವು ಸರಳವಾಗಿ ಭವ್ಯವಾಗಿದೆ, ಅದ್ಭುತವಾಗಿದೆ! ತವಾಂಗ್ನಿಂದ ಮಾಗೊಗೆ ಪ್ರಯಾಣಿಸುವಾಗ ನೀವು ಈ ಸ್ಥಳವನ್ನು ತಲುಪಬಹುದು. ಹಸಿರಿನಿಂದ ಕೂಡಿದ ಆ ಪ್ರದೇಶದ ಆಕರ್ಷಕ ಮೋಡಿ ನಿಮ್ಮ ಕಲ್ಪನೆಗೂ ಮೀರಿ ನಿಮ್ಮನ್ನು ಆಕಷಿರ್ಸುತ್ತದೆ. ಪ್ರಕೃತಿಯ ವೈಭವವನ್ನು ಆನಂದಿಸಲು ಭೇಟಿ ನೀಡಿ ಎಂದು ಆಹ್ವಾನ ನೀಡಿದ್ದಾರೆ. ಕಳೆದ ವರ್ಷ ಅರುಣಾಚಲ ಪ್ರದೇಶದ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು ‘ದೇಖೋ ಅಪ್ನಾ ಪ್ರದೇಶ’ ಅಭಿಯಾನವನ್ನು ಪ್ರಾರಂಭಿಸಲಾಯಿತು. ಮುಖ್ಯಮಂತ್ರಿ ಪೆಮಾ ಖಂಡು ಅವರು ತಮ್ಮ ರಾಜ್ಯದ ಅನ್ ಎಕ್ಸ್ಪ್ಲೋರ್ ಸೌಂದರ್ಯವನ್ನು ವಿವರಿಸುವ ಅದ್ಭುತ ಚಿತ್ರಗಳು ಮತ್ತು ವೀಡಿಯೊಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ರಾಜ್ಯದ ತವಾಂಗ್ ಜಿಲ್ಲೆಯ ಬೇಘರ್ ಗ್ರಾಮದ ವೀಡಿಯೊವನ್ನು ಹಂಚಿಕೊಂಡಿದ್ದರು. Yameng waterfall is simply magnificent, amazing! You can reach this iconic place while traveling from Tawang to Mago. Verdant greenery, captivating charm of the area will enthrall you beyond your imagination. Do visit to enjoy the grandeur of nature #DekhoApnaPradesh pic.twitter.com/JENF9DEbvG — Pema Khandu པདྨ་མཁའ་འགྲོ་། (Modi Ka Parivar) (@PemaKhanduBJP) October 9, 2022 Flagged-off #DekhoApnaPradesh today to kickstart tourism in Arunachal affected by #COVID19. Participants will dive deep into different cultures and natural landscapes of state. The move is aimed at encouraging people to travel within the state letting know their state better. pic.twitter.com/tbaRDUxMb1 — Pema Khandu པདྨ་མཁའ་འགྲོ་། (Modi Ka Parivar) (@PemaKhanduBJP) March 22, 2021 It's Beghar village in Tawang. So green and magnificent! Great are the people who take pride in taking care of their village so well. Beghar is a must visit destination. Join #DekhoApnaPradesh campaign and enjoy the beauty and diversity of our sweet #Arunachal. Video: Dukhum Magu pic.twitter.com/sdWr70yx7P — Pema Khandu པདྨ་མཁའ་འགྲོ་། (Modi Ka Parivar) (@PemaKhanduBJP) September 30, 2022