ಐಐಟಿಯಲ್ಲಿ ಪ್ರವೇಶ ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ದೇಶದ ಇಂಜಿನಿಯರ್ ಆಕಾಂಕ್ಷಿಯ ಕನಸು ಎಂದು ಹೇಳಿದರೆ ತಪ್ಪಾಗಲಾರದು. ಐಐಟಿ ಬ್ರ್ಯಾಂಡ್ ಹೆಸರು ಸಿಗುತ್ತೆ ಅಂದರೆ ಬೇಡ ಎಂದು ಹೇಳಲು ಯಾರೂ ತಯಾರಿರುವುದಿಲ್ಲ.
ಆದರೆ ಸೈನ್ಸ್ ಬಿಟ್ಟು ಬೇರೆ ವಿಭಾಗಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಐಐಟಿ ಅನ್ನೋದು ಕೇವಲ ಕನಸು ಎಂಬತಾಗಿತ್ತು. ಆದರೆ ಕಲಾ, ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡಿದವರು ಕೂಡ ಐಐಟಿ ಪ್ರವೇಶ ಮಾಡಲು ಅನೇಕ ಮಾರ್ಗಗಳಿವೆ. ಕಲಾ ಹಾಗೂ ವಾಣಿಜ್ಯ ವಿಭಾಗದಿಂದ ಬಂದವರು ವಿನ್ಯಾಸ, ಮ್ಯಾನೇಜ್ಮೆಂಟ್ ಸೇರಿದಂತೆ ಇತರೆ ವಿಭಾಗಗಳಲ್ಲಿ ವ್ಯಾಸಂಗ ಮಾಡಬಹುದಾಗಿದೆ.
ಬ್ಯಾಚುಲರ್ ಆಫ್ ಡಿಸೈನ್
ಬ್ಯಾಚುಲರ್ ಆಫ್ ಡಿಸೈನ್ ಎನ್ನುವುದು ನಾಲ್ಕು ವರ್ಷಗಳ ಪದವಿಪೂರ್ವ ಕಾರ್ಯಕ್ರಮವಾಗಿದೆ. ಈ ವಿಭಾಗದಲ್ಲಿ ವಿದ್ಯಾರ್ಥಿಗಳು ಡಿಸೈನ್, ಫೋಟೋಗ್ರಫಿ ಸೇರಿದಂತೆ ಸಾಕಷ್ಟು ವಿಷಯಗಳನ್ನು ಕಲಿಸಲಾಗುತ್ತದೆ. ಸಾಮಾನ್ಯ ಪ್ರವೇಶ ಪರೀಕ್ಷೆ (UCEED) ಮೂಲಕ ಈ ಕೋರ್ಸ್ಗೆ ಪ್ರವೇಶ ಪಡೆಯಬಹುದಾಗಿದೆ. ಐಐಟಿ ಮುಂಬೈ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯನ್ನು ಆಯೋಜಿಸುತ್ತದೆ.
ಪ್ರಸ್ತುತ ಐಐಟಿ ಮುಂಬೈ( 37 ಸೀಟು), ಐಐಟಿ ಹೈದರಾಬಾದ್(20 ಸೀಟುಗಳು) ಹಾಗೂ ಐಐಟಿ ಗುವಾಹಟಿ (56 ಸೀಟುಗಳು)ಯಲ್ಲಿ ವಿದ್ಯಾರ್ಥಿಗಳು ಈ ಕೋರ್ಸ್ನ್ನು ವ್ಯಾಸಂಗ ಮಾಡಬಹುದಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಐಐಟಿ ದೆಹಲಿಯಲ್ಲಿ ಬ್ಯಾಚುಲರ್ ಆಫ್ ಡಿಸೈನ್ ಕೋರ್ಸ್ ಲಭ್ಯವಿರಲಿದೆ.
ಅರ್ಹತಾ ಮಾನದಂಡ : 24 ವರ್ಷದ ಒಳಗಾಗಿ 12ನೇ ತರಗತಿಯಲ್ಲಿ ಉತ್ತೀರ್ಣರಾದವರು ಈ ಕೋರ್ಸ್ಗೆ ಸೇರಲು ಪ್ರವೇಶ ಪರೀಕ್ಷೆಯನ್ನು ಎದುರಿಸಬಹುದಾಗಿದೆ.
ಮಾಸ್ಟರ್ ಆಫ್ ಡಿಸೈನ್
ಮಾಸ್ಟರ್ ಆಫ್ ಡಿಸೈನ್ 2 ವರ್ಷಗಳ ಸ್ನಾತಕೋತ್ತರ ಪದವಿಯಾಗಿದೆ. ಆಸಕ್ತ ವಿದ್ಯಾರ್ಥಿಗಳು CEED ಮೂಲಕ ಈ ಐಐಟಿ ಕೋರ್ಸ್ಗೆ ದಾಖಲಾತಿ ಪಡೆಯಬಹುದಾಗಿದೆ.
ಜಬಲ್ಪುರ ಸೇರಿದಂತೆ ದೇಶದ ಆರು ಐಐಟಿಗಳಲ್ಲಿ ಈ ಕೋರ್ಸ್ ಲಭ್ಯವಿದೆ. ಬಾಂಬೆ, ಹೈದರಾಬಾದ್, ಗುವಾಹಟಿ, ದೆಹಲಿ, ಕಾನ್ಪುರ ಐಐಟಿಯಲ್ಲಿ ಈ ಸ್ನಾತಕೋತ್ತರ ಪದವಿಯನ್ನು ಮಾಡಬಹುದಾಗಿದೆ.
ಅರ್ಹತಾ ಮಾನದಂಡ : ಡಿಗ್ರಿ, ಡಿಪ್ಲೋಮಾ ಅಥವಾ ಸ್ನಾತಕೋತ್ತರ ಪದವಿ ಪೂರೈಸಿದ ಯಾವುದೇ ಅಭ್ಯರ್ಥಿಯು ಈ ಕೋರ್ಸ್ಗೆ ಅರ್ಜಿ ಸಲ್ಲಿಸಬಹುದಾಗಿದೆ. ಜಿಡಿ ಆರ್ಟ್ಸ್ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳೂ ಸಹ ಈ ಪರೀಕ್ಷೆಯನ್ನು ಎದುರಿಸಬಹುದಾಗಿದೆ.
ಎಂಎ ಸ್ಪೆಷಲೈಸೇಷನ್
ಭಾಷಾ ವಿಷಯ, ಸೋಶಿಯಲ್ ವರ್ಕ್, ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರ, ಭೌಗೋಳಿಕ ಶಾಸ್ತ್ರ, ತತ್ವಶಾಸ್ತ್ರದ ವಿಭಾಗಗಳಲ್ಲಿ 2 ವರ್ಷಗಳ ಕಾಲ ಎಂಎ ವ್ಯಾಸಂಗ ಮಾಡಬಹುದಾಗಿದೆ.
ಐಐಟಿ ಗಾಂಧಿನಗರ, ಐಐಟಿ ಮದ್ರಾಸ್ ಹಾಗೂ ಐಐಟಿ ಗುವಾಹಟಿಯಲ್ಲಿ ಈ ಸ್ನಾತಕೋತ್ತರ ಪದವಿ ಪಡೆಯಬಹುದು.
ಅರ್ಹತಾ ಮಾನದಂಡ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಈ ಎಂಎಗೆ ಅರ್ಜಿ ಸಲ್ಲಿಸಬಹುದಾಗಿದೆ.
ಮಾಸ್ಟರ್ ಆಫ್ ಬ್ಯಸಿನೆಸ್ ಅಡ್ಮಿನಿಸ್ಟ್ರೇಷನ್
ಎಂಬಿಎ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಐಐಟಿಯಲ್ಲಿ ವ್ಯಾಸಂಗ ಮಾಡಬಹುದಾಗಿದೆ. CATನಲ್ಲಿ ಅಭ್ಯರ್ಥಿಯ ಕಾರ್ಯಕ್ಷಮತೆಯನ್ನು ಆಧರಿಸಿ ಈ ಕೋರ್ಸ್ಗೆ ಪ್ರವೇಶ ನೀಡಲಾಗುತ್ತದೆ.
ಪ್ರಸ್ತುತ ಐಐಟಿ ಮುಂಬೈ, ಐಐಟಿ ದೆಹಲಿ, ಐಐಟಿ ಮದ್ರಾಸ್, ಐಐಟಿ ರೂರ್ಕಿ, ಐಐಟಿ ಕಾನ್ಪುರ, ಐಐಟಿ ಧನ್ಬಾದ್, ಐಐಟಿ ಖರಗ್ಪುರ, ಹಾಗೂ ಐಐಟಿ ಜೋಧ್ಪುರದಲ್ಲಿ ಎಂಬಿಎ ವ್ಯಾಸಂಗ ಮಾಡಬಹುದಾಗಿದೆ.