alex Certify ಜಿಮ್​ನಲ್ಲಿ ಅನಾವರಣಗೊಂಡ ಪುರಾಣದ ಅದ್ಭುತ ಸಾಂಸ್ಕೃತಿಕ ಸಂಯೋಜನೆ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಮ್​ನಲ್ಲಿ ಅನಾವರಣಗೊಂಡ ಪುರಾಣದ ಅದ್ಭುತ ಸಾಂಸ್ಕೃತಿಕ ಸಂಯೋಜನೆ: ವಿಡಿಯೋ ವೈರಲ್

ಭಾರತೀಯ ಪುರಾಣಗಳಲ್ಲಿ ಬರುವ ಪಾತ್ರಗಳು ವರ್ಣರಂಜಿತ, ನಾಟಕೀಯ ಮತ್ತು ವಿಸ್ಮಯಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಗೋವಾದ ಒಬ್ಬ ಕಲಾವಿದ ಆ ಶ್ರೀಮಂತ ಸಾಂಸ್ಕೃತಿಕ ಭಾಗವನ್ನು ಕಾಪಾಡಿಕೊಂಡು ಬರುವ ಸಲುವಾಗಿ ಕಲೆಯಿಂದ ತುಂಬಿದ ಅದ್ಭುತವಾದ ಹೊರಾಂಗಣ ಜಿಮ್ ಅನ್ನು ನಿರ್ಮಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ದಿಪ್ತೇಜ್ ವೆರ್ನೆಕರ್ ಹಂಚಿಕೊಂಡಿರುವ ಈ ವಿಡಿಯೋ ನಿಮ್ಮನ್ನು ಬೆರಗುಗೊಳಿಸುತ್ತದೆ. ಕಲಾವಿದ ವೆರ್ಣೇಕರ್ ಅವರು ಇಂಥ ರಚನೆಗಳನ್ನು ಮಾಡಿದ್ದಾರೆ. “ನಾನು ಗೋವಾದ ಒಂದು ಸಣ್ಣ ಹಳ್ಳಿಯಲ್ಲಿ ಬೆಳೆದಿದ್ದೇನೆ, ಟ್ಯಾಬ್ಲಾಕ್ಸ್ ರೂಪದಲ್ಲಿ ವಿವಿಧ ಚಲಿಸುವ ಕಲಾ ಪ್ರಕಾರಗಳಿಗೆ ಈ ಊರು ಹೆಸರುವಾಸಿಯಾಗಿದೆ. ಅವುಗಳನ್ನು ವಿವಿಧ ಹಬ್ಬಗಳಲ್ಲಿ ಬಳಸಲಾಗುತ್ತದೆ. ಇದರಿಂದ ನಾನು ಪ್ರೇರಣೆ ಪಡೆದೆ” ಎಂದು ದಿಪ್ತೇಜ್​ ಹೇಳುತ್ತಾರೆ.

ಇಲ್ಲಿ ಒಮ್ಮೆ ಬಳಸಿದ ಈ ಕಲಾಕೃತಿಗಳನ್ನು ನಂತರ ವರ್ಷದ ಉಳಿದ ಭಾಗದಲ್ಲಿ ಸಂರಕ್ಷಿಸಲಾಗುತ್ತದೆ. ಸ್ಥಳೀಯ ಸಮುದಾಯಗಳ ಕುಶಲಕರ್ಮಿಗಳಿಂದ ಇದು ರಚಿಸಲ್ಪಟ್ಟಿದೆ, ಈ ಸಮುದಾಯಗಳು ತಮ್ಮ ಕಲೆಯನ್ನು ಪೋಷಿಸಲು ಸಾಹಸ ಪಡುತ್ತಿದ್ದಾರೆ ಎಂದು ದಿಪ್ತೇಜ್​ ಮಾಹಿತಿ ನೀಡುತ್ತಾರೆ.

ಈ ಕಲೆಯು ಗೋವಾದಲ್ಲಿ ನಡೆಯುವ ಸೆರೆಂಡಿಪಿಟಿ ಕಲಾ ಉತ್ಸವದ ಒಂದು ಭಾಗವಾಗಿದೆ ಮತ್ತು ಡಿಸೆಂಬರ್ 15 ರಿಂದ 23 ರವರೆಗೆ ಪ್ರದರ್ಶನಗೊಳ್ಳಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...