alex Certify ತನ್ನ ಕಲಾಕೃತಿಗೆ ತಕ್ಕಂತೆ ಉಡುಪು ತಯಾರಿಸಿದ ಕಲಾವಿದೆಗೆ ಭಾರಿ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ಕಲಾಕೃತಿಗೆ ತಕ್ಕಂತೆ ಉಡುಪು ತಯಾರಿಸಿದ ಕಲಾವಿದೆಗೆ ಭಾರಿ ಮೆಚ್ಚುಗೆ

ಲೂಸಿಯಾನದ ಕಲಾವಿದೆ ಮ್ಯಾಂಡಿ ಪೋಚೆ ತಯಾರಿಸಿರುವ ಡ್ರೆಸ್​ ಒಂದು ಇದೀಗ ಭಾರಿ ವೈರಲ್​ ಆಗಿದೆ. ಕಲಾವಿದೆ ತನ್ನ ಕಲೆಯ ಪ್ರದರ್ಶನದ ಉದ್ಘಾಟನೆಗೆ ಏನಾದರೂ ಹೊಸ ಬಟ್ಟೆ ಧರಿಸುವ ಯೋಚನೆ ಮಾಡಿದ್ದಳು. ಕೊನೆಗೆ ಆಕೆಗೆ ಬಂದು ಯೋಚನೆ ಎಂದರೆ ತನ್ನ ಕಲಾಕೃತಿಗೆ ಅನ್ವಯ ಆಗುವಂಥ ಡ್ರೆಸ್​ ತಯಾರಿಸುವುದು. ಇದಕ್ಕಾಗಿ ಆಕೆ ಬಿಳಿಯ ಬಟ್ಟೆಯ ಮೇಲೆ ಕಲಾಕೃತಿಯನ್ನೇ ಹೋಲುವ ಪೇಂಟಿಂಗ್​ ಮಾಡುವ ಮೂಲಕ ಹೊಸ ಡ್ರೆಸ್​ ತಯಾರಿಸಿದ್ದು, ಇದರ ಕೌಶಲಕ್ಕೆ ನೆಟ್ಟಿಗರು ಬೆರಗಾಗಿದ್ದಾರೆ.

ಬಿಳಿಯ ಬಣ್ಣದ ಬಟ್ಟೆಗೆ ಬಣ್ಣ ಬಳಿಯುವಾಗ ಮನೆಯವರೆಲ್ಲಾ ತಮಾಷೆ ಮಾಡಿದ್ದರು. ಆಗ ಪೋಚೆ, ತಮಾಷೆ ಮಾಡುತ್ತಿರುವಿರಾ? ನೋಡಿಯೇ ಬಿಡೋಣ. ಇದು ಎಷ್ಟು ಮಂದಿ ಮೆಚ್ಚಿಕೊಳ್ಳುತ್ತಾರೆ, ಇದು ವೈರಲ್​ ಕೂಡ ಆಗಲಿದೆ ಎಂದಿದ್ದಳು. ಇದು ತಮಾಷೆಗೆ ಹೇಳಿದ್ದರೂ, ನಿಜಕ್ಕೂ ಈ ಬಟ್ಟೆಯು ವೈರಲ್​ ಆಗಿದ್ದು, ಹಲವರು ಇದಕ್ಕೆ ಮೆಚ್ಚುಗೆ ಸೂಸುತ್ತಿದ್ದಾರೆ.

ಕಲಾವಿದೆ ಎನ್ನ ಉಡುಪಿನ ಮೇಲೆ ವೈಢೂರ್ಯದ ಬ್ರಷ್ ಮೂಲಕ ಸ್ಟ್ರೋಕ್ ಮಾಡುವುದನ್ನು ನೋಡಬಹುದು. ಅದೇ ರೀತಿಯ ವರ್ಣರಂಜಿತ ಚಿತ್ರಕಲೆಯ ಪಕ್ಕದಲ್ಲಿ ಇರುವುದನ್ನೂ ಗಮನಿಸಬಹುದು. ಪ್ರಕಾಶಮಾನವಾದ ವರ್ಣದ ಉಡುಪಿನೊಂದಿಗೆ ಈ ವಿಡಿಯೋ ಕೊನೆಗೊಳ್ಳುತ್ತದೆ. ಇಷ್ಟು ಸುಂದರ ಡ್ರೆಸ್​ ರಚಿಸಿರುವುದಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.

Image - 2022-11-23T090532.746

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...