alex Certify ಸುದ್ದಿ ಪ್ರಸಾರ ಮಾಡುವುದಾಗಿ ಸುಲಿಗೆಗಿಳಿದ ವಾಹಿನಿ ವರದಿಗಾರ ಸೇರಿ 6 ಮಂದಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುದ್ದಿ ಪ್ರಸಾರ ಮಾಡುವುದಾಗಿ ಸುಲಿಗೆಗಿಳಿದ ವಾಹಿನಿ ವರದಿಗಾರ ಸೇರಿ 6 ಮಂದಿ ಅರೆಸ್ಟ್

ಬೆಂಗಳೂರು: ಖಾಸಗಿ ಕಾರ್ಖಾನೆಯ ಇಬ್ಬರು ನೌಕರರನ್ನು ಅಪಹರಿಸಿ 20 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಯುಟ್ಯೂಬ್ ಚಾನೆಲ್ ವರದಿಗಾರ ಮತ್ತು ರೌಡಿಶೀಟರ್ ಸೇರಿದಂತೆ 6 ಮಂದಿಯನ್ನು ಮಹಾಲಕ್ಷ್ಮಿಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಯುಟ್ಯೂಬ್ ಚಾನೆಲ್ ವರದಿಗಾರ ಸಂತೋಷ(32) ಮಹಾಲಕ್ಷ್ಮಿಲೇಔಟ್ ರೌಡಿಶೀಟರ್ ರಮೇಶ್, ಹರೀಶ, ವಿವೇಕ, ದುರ್ಗೇಶ ಹಾಗೂ ಅರವಿಂದ ಬಂಧಿತ ಆರೋಪಿಗಳು.

ಕುರುಬರ ಹಳ್ಳಿಯಲ್ಲಿ ನಿತೇಶ್ ಎಂಬುವರು ಆಹಾರ ಸಾಮಗ್ರಿ ಪೂರೈಕೆ ಮಾಡುವ ವ್ಯವಹಾರ ನಡೆಸುತ್ತಿದ್ದು, ನಾಲ್ಕು ತಿಂಗಳ ಹಿಂದೆ ಅಲ್ಲಿಗೆ ಹೋಗಿದ್ದ ಸಂತೋಷ ಟಿವಿ ವಾಹಿನಿ ವರದಿಗಾರ ಎಂದು ಪರಿಚಯಿಸಿಕೊಂಡಿದ್ದ. ನಿಮ್ಮಲ್ಲಿ ಕಳಪೆ ಗುಣಮಟ್ಟದ ಆಹಾರ ಮಾರಾಟ ಮಾಡಲಾಗುತ್ತಿದೆ ಎಂದು ಟಿವಿಯಲ್ಲಿ ಪ್ರಸಾರ ಮಾಡುತ್ತೇನೆ ಎಂದು ಬೆದರಿಸಿದ್ದ, ಸುದ್ದಿ ಪ್ರಸಾರ ಮಾಡದಂತೆ ತಡೆಯಲು ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದ.

ಅಲ್ಲದೇ, ಹಲವಾರು ಬಾರಿ ಕರೆ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ. ಇದಕ್ಕೆ ನಿತೇಶ್ ತಲೆಕೆಡಿಸಿಕೊಂಡಿರಲಿಲ್ಲ. ಅವರ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರನ್ನು ತನ್ನ ಸಹಚರರೊಂದಿಗೆ ಸೇರಿ ಅಪಹರಿಸಿದ್ದ ಸಂತೋಷ್, ನಿಮ್ಮ ನೌಕರರನ್ನು ಬಿಡಲು 20 ಲಕ್ಷ ಕೊಡಬೇಕೆಂದು ಬೇಡಿಕೆ ಇಟ್ಟಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...