alex Certify ಅಧಿಕಾರಿಗಳಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ, ಪತ್ನಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಧಿಕಾರಿಗಳಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿದ್ದ ಕಾಂಗ್ರೆಸ್ ಮುಖಂಡ, ಪತ್ನಿ ಅರೆಸ್ಟ್

ಮೈಸೂರು: ನೋಟಿಸ್ ನೀಡಲು ಬಂದಿದ್ದ ಅಧಿಕಾರಿಗೆ ಮಚ್ಚು ತೋರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗೆ ಮಚ್ಚು ತೋರಿಸಿದ ದಂಪತಿಯನ್ನು ಬಂಧಿಸಲಾಗಿದೆ ಎಂದು ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಮುಖಂಡ ಶಫೀಕ್ ಅಹಮದ್ ಮತ್ತು ಆತನ ಪತ್ನಿಯನ್ನು ಬಂಧಿಸಲಾಗಿದೆ. ಡಿಸೆಂಬರ್ 10 ರಂದು ಕಟ್ಟಡ ಖಾಲಿ ಮಾಡಿಸಲು ಹೋಗಿದ್ದ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗಿತ್ತು.

ಸಾತಗಳ್ಳಿ ಬಸ್ ಡಿಪೋ ಅಧಿಕಾರಿಗಳು ಕಟ್ಟಡದ ಸ್ಥಳಕ್ಕೆ ಹೋದಾಗ ದಂಪತಿ ಮುಚ್ಚು ತೋರಿಸಿ ಅಧಿಕಾರಿಗಳನ್ನು ಬೆದರಿಸಿದ್ದರು. 2017ರಲ್ಲಿ 12 ವರ್ಷಗಳ ಅವಧಿಗೆ ಕಟ್ಟಡ ಬಾಡಿಗೆ ಪಡೆದುಕೊಂಡಿದ್ದ ಶಫೀಕ್ ಎರಡು ವರ್ಷಗಳ ಕಾಲ ಬಾಡಿಗೆ ಕಟ್ಟಿರಲಿಲ್ಲ. ಕೊರೊನಾ ಕಾರಣ ನೀಡಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು.

ಸ್ಟೇ ಅವಧಿ ಮುಗಿದ ನಂತರ ಡಿ. 11 ರಂದು ಅಧಿಕಾರಿಗಳು ಕಟ್ಟಡ ಖಾಲಿ ಮಾಡಿಸಲು ಹೋಗಿದ್ದರು. ಪೊಲೀಸರಿಗೆ ಮಾಹಿತಿ ನೀಡದೇ ಹೋಗಿದ್ದು, ಘಟನೆ ನಂತರ ದಂಪತಿ ಪರಾರಿಯಾಗಿದ್ದರು. ನಿನ್ನೆ ಸಂಜೆ ವಿರಾಜಪೇಟೆ ಸಮೀಪ ಬಂಧಿಸಿ ಕರೆತರಲಾಗಿದ್ದು, ಅವರ ವಿರುದ್ಧ ರೌಡಿಶೀಟರ್ ತೆರೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...