ಜಾರ್ಖಂಡಿನ ಛತ್ರ ಜಿಲ್ಲೆಯಲ್ಲಿ ಮಾಸ್ಕ್ ಧರಿಸದ ಯೋಧನೊಬ್ಬನಿಗೆ ಪೊಲೀಸರು ಹಲ್ಲೆ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ತಾಣದಲ್ಲಿ ಲಭ್ಯವಾಗಿದ್ದು, ನೋಡುಗರು ಆಘಾತ ವ್ಯಕ್ತಪಡಿಸುತ್ತಿದ್ದಾರೆ.
ಛತ್ರ ಜಿಲ್ಲೆಯ ಮಯೂರ್ ಬಂದ್ನಲ್ಲಿ, ಪೊಲೀಸರು ತಮ್ಮ ದೈನಂದಿನ ಮಾಸ್ಕ್
ಪರಿಶೀಲನೆ ಕಾರ್ಯಾಚರಣೆಯ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ.
ಯೋಧ ಪವನ್ ಕುಮಾರ್ ಯಾದವ್ ಎಂದು ಗುರುತಿಸಲಾಗಿದ್ದು, ಮಾಸ್ಕ್ ಧರಿಸದ ಆತನ ಮೇಲೆ ಸ್ಥಳೀಯ ಪೊಲೀಸರು ಅತ್ಯಂತ ದಾರುಣವಾಗಿ ಹೊಡೆದಿದ್ದಾರೆ. ಹಲ್ಲೆ ಮಾಡಿದ ಪೊಲೀಸರೇ ಮಾಸ್ಕ್ ಧರಿಸದೇ ಇದ್ದದ್ದು ಗಮನಿಸಬೇಕಾದ ಸಂಗತಿ.
ವಿಮಾನ ಕಟ್ಟಡಕ್ಕೆ ಅಪ್ಪಳಿಸಿ ನಾಲ್ವರ ದುರಂತ ಸಾವು
ಘಟನೆ ಸ್ಥಳದಲ್ಲಿ ಇದ್ದವರ ಪ್ರಕಾರ, ಮಾಸ್ಕ್ ಧರಿಸದೇ ಬಂದ ಯೋಧನ ಬೈಕಿನ ಕಿ ಎತ್ತಿಟ್ಟುಕೊಂಡಿದ್ದಕ್ಕೆ, ಯೋಧನೂ ಮಾತಿಗೆ ಇಳಿದಿದ್ದಾನೆ, ಮಾತಿಗೆ ಮಾತು ಬೆಳೆದು, ಪೊಲೀಸರು ಈತನ ಮೇಲೆ ಕೈ ಮಾಡಿದ್ದಾರೆ ಎನ್ನಲಾಗಿದೆ.
https://twitter.com/srajiv8858/status/1433308717089386501?ref_src=twsrc%5Etfw%7Ctwcamp%5Etweetembed%7Ctwterm%5E1433308717089386501%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-army-jawan-brutally-beaten-thrashed-by-cops-for-not-wearing-mask-jharkhands-chatra-twitter-enraged-watch-4930316%2F