alex Certify 16 ಕೋಟಿ ರೂ.ನ ಅಪಾರ್ಟ್​ಮೆಂಟ್​ ಮಾರಾಟ ಮಾಡಿದ ಅರ್ಜುನ್​ ಕಪೂರ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

16 ಕೋಟಿ ರೂ.ನ ಅಪಾರ್ಟ್​ಮೆಂಟ್​ ಮಾರಾಟ ಮಾಡಿದ ಅರ್ಜುನ್​ ಕಪೂರ್​

ಬಾಲಿವುಡ್​ ನಟ ಅರ್ಜುನ್​ ಕಪೂರ್​ ಬಾಂದ್ರಾ ವೆಸ್ಟ್​ನಲ್ಲಿದ್ದ ತಮ್ಮ 4,364 ಚದರ ಅಡಿ ಫ್ಲಾಟ್​ ಅನ್ನು 16 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಈ ಬೆಲೆಬಾಳುವ 19ನೇ ಮಹಡಿಯಲ್ಲಿನ ಅಪಾರ್ಟ್​ಮೆಂಟ್​ ಕೆಸಿ ಮಾರ್ಗ್​ನಲ್ಲಿರುವ 81 ಆರೆಟ್​ ಕಟ್ಟಡದಲ್ಲಿದೆ, ಇದು ಅನೇಕ ಸೆಲೆಬ್ರಿಟಿಗಳಿಗೆ ನೆಲೆ ಎಂಬುದು ವಿಶೇಷ ಸಂಗತಿ.

ಕುತೂಹಲಕಾರಿ ಸಂಗತಿ ಎಂದರೆ ಅರ್ಜುನ್​ ಈ ಬೆಲೆಬಾಳುವ ಬಾಂದ್ರಾ ಮನೆಯಲ್ಲಿ ವಾಸವಾಗಿರಲಿಲ್ಲ. ಅವರು ಪ್ರಸ್ತುತ ಜುಹುದಲ್ಲಿನ ಜೆವಿಪಿಡಿ ಪ್ರಾಜೆಕ್ಟ್​ನ ರಹೇಜಾ ಆರ್ಮಿಡ್‌ನ ಏಳನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ.

ಅರ್ಜುನ್​ ಕಪೂರ್​ ಅವರ ಲೇಡಿ ಲವ್​ ಮಲೈಕಾ ಅರೋರಾ ಕೂಡ 81 ಆರೆಟ್​ ಕಟ್ಟಡದಲ್ಲಿ ಫ್ಲಾಟ್​ ಹೊಂದಿದ್ದಾರೆ ಎಂಬುದು ವಿಶೇಷ ಸಂಗತಿ. ಬಿಗ್​ ಬಾಸ್​ 15 ರ ಖ್ಯಾತಿಯ ಕರಣ್​ ಕುಂದ್ರಾ ಅದೇ ಕಟ್ಟಡದಲ್ಲಿ ಸಮುದ್ರಕ್ಕೆ ಎದುರಾಗಿರುವ ಫ್ಲಾಟ್​ ಅನ್ನು ಖರೀದಿಸಿದ್ದಾರೆ.

5,238 ಚದರ ಅಡಿಯ ಫ್ಲಾಟ್​ಗಾಗಿ ಅವರು 14 ಕೋಟಿ ರೂ. ವ್ಯಯಿಸಿದ್ದು ಅವರ ಮನೆಯಲ್ಲಿ ಖಾಸಗಿ ಲಿಫ್ಟ್​ ಮತ್ತು ಈಜುಕೊಳವಿದೆ. ಪೋಡಿಯಂನಲ್ಲಿ ಮೂರು ಕಾರ್​ ಪಾರ್ಕಿಂಗ್​ ಸ್ಥಳಗಳಿಗೆ ಅವಕಾಶ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...