
ಬಾಲಿವುಡ್ ನಟ ಅರ್ಜುನ್ ಕಪೂರ್ ಬಾಂದ್ರಾ ವೆಸ್ಟ್ನಲ್ಲಿದ್ದ ತಮ್ಮ 4,364 ಚದರ ಅಡಿ ಫ್ಲಾಟ್ ಅನ್ನು 16 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಈ ಬೆಲೆಬಾಳುವ 19ನೇ ಮಹಡಿಯಲ್ಲಿನ ಅಪಾರ್ಟ್ಮೆಂಟ್ ಕೆಸಿ ಮಾರ್ಗ್ನಲ್ಲಿರುವ 81 ಆರೆಟ್ ಕಟ್ಟಡದಲ್ಲಿದೆ, ಇದು ಅನೇಕ ಸೆಲೆಬ್ರಿಟಿಗಳಿಗೆ ನೆಲೆ ಎಂಬುದು ವಿಶೇಷ ಸಂಗತಿ.
ಕುತೂಹಲಕಾರಿ ಸಂಗತಿ ಎಂದರೆ ಅರ್ಜುನ್ ಈ ಬೆಲೆಬಾಳುವ ಬಾಂದ್ರಾ ಮನೆಯಲ್ಲಿ ವಾಸವಾಗಿರಲಿಲ್ಲ. ಅವರು ಪ್ರಸ್ತುತ ಜುಹುದಲ್ಲಿನ ಜೆವಿಪಿಡಿ ಪ್ರಾಜೆಕ್ಟ್ನ ರಹೇಜಾ ಆರ್ಮಿಡ್‌ನ ಏಳನೇ ಮಹಡಿಯಲ್ಲಿ ವಾಸಿಸುತ್ತಿದ್ದಾರೆ.
ಅರ್ಜುನ್ ಕಪೂರ್ ಅವರ ಲೇಡಿ ಲವ್ ಮಲೈಕಾ ಅರೋರಾ ಕೂಡ 81 ಆರೆಟ್ ಕಟ್ಟಡದಲ್ಲಿ ಫ್ಲಾಟ್ ಹೊಂದಿದ್ದಾರೆ ಎಂಬುದು ವಿಶೇಷ ಸಂಗತಿ. ಬಿಗ್ ಬಾಸ್ 15 ರ ಖ್ಯಾತಿಯ ಕರಣ್ ಕುಂದ್ರಾ ಅದೇ ಕಟ್ಟಡದಲ್ಲಿ ಸಮುದ್ರಕ್ಕೆ ಎದುರಾಗಿರುವ ಫ್ಲಾಟ್ ಅನ್ನು ಖರೀದಿಸಿದ್ದಾರೆ.
5,238 ಚದರ ಅಡಿಯ ಫ್ಲಾಟ್ಗಾಗಿ ಅವರು 14 ಕೋಟಿ ರೂ. ವ್ಯಯಿಸಿದ್ದು ಅವರ ಮನೆಯಲ್ಲಿ ಖಾಸಗಿ ಲಿಫ್ಟ್ ಮತ್ತು ಈಜುಕೊಳವಿದೆ. ಪೋಡಿಯಂನಲ್ಲಿ ಮೂರು ಕಾರ್ ಪಾರ್ಕಿಂಗ್ ಸ್ಥಳಗಳಿಗೆ ಅವಕಾಶ ಪಡೆದಿದ್ದಾರೆ.