alex Certify ಐಷಾರಾಮಿ ಕಾರು ಖರೀದಿಸಿದ ನಟ ಅರ್ಜುನ್​ ಕಪೂರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಷಾರಾಮಿ ಕಾರು ಖರೀದಿಸಿದ ನಟ ಅರ್ಜುನ್​ ಕಪೂರ್

ಸೆಲೆಬ್ರಿಟಿಗಳು ಅಂದಮೇಲೆ ಅವರ ಬಳಿ ಕಾರು ಕಲೆಕ್ಷನ್​ ಕೂಡ ಅದೇ ರೀತಿ ಇರುತ್ತದೆ. ದುಬಾರಿ ಬೆಲೆಯ ಕಾರುಗಳನ್ನು ಖರೀದಿಸುವುದು ಸೆಲೆಬ್ರಿಟಿಗಳ ಕ್ರೇಜ್​ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ಜರ್ಮನ್​ ಕಾರು ತಯಾರಕ ಸಂಸ್ಥೆಯು Mercedes-Maybach GLS 600 ದುಬಾರಿ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು.

ದುಬಾರಿಯ ಬೆಲೆಯ ಹೊರತಾಗಿಯೂ ಭಾರತದಲ್ಲಿ ಜಿಎಲ್​ಎಸ್​ ಮೊದಲ ಬ್ಯಾಚ್​ ಮಾರಾಟವಾಗಿದೆ. 2.43 ಕೋಟಿ ರೂಪಾಯಿ ಬೆಲೆಯ ಈ ಕಾರನ್ನು ನಟ ಅರ್ಜುನ್​ ಕಪೂರ್​ ಖರೀದಿ ಮಾಡಿದ್ದಾರೆ.

ಮರ್ಸಿಡೀಸ್​ ಬೆಂಜ್​ ಡೀಲರ್​ಶಿಪ್​ ಫೋಟೋಗಳನ್ನು ಶೇರ್​ ಮಾಡಿದೆ. ಇದೇ ವರ್ಷ ಏಪ್ರಿಲ್​ ತಿಂಗಳಲ್ಲಿ ನಟ ಅರ್ಜುನ್​ ಕಪೂರ್​​ ಲ್ಯಾಂಡ್​ ರೋವರ್​​ ಡಿಫೆಂಡರ್​ 110 ಎಸ್​ಯುವಿ ಖರೀದಿ ಮಾಡಿದ್ದರು. ಈ ವರ್ಷ ಜೂನ್​ನಲ್ಲಿ ಲಾಂಚ್​ ಆಗಿದ್ದ ಈ Mercedes-Maybach GLS 600 ಐಷಾರಾಮಿ ಕಾರುಗಳಾದ ಲ್ಯಾಂಡ್​ ರೋವರ್​ ರೇಂಜ್​ ರೋವರ್​ ಸೇರಿದಂತೆ ಅನೇಕ ಎಸ್​ಯುವಿಗಳಿಗೆ ಠಕ್ಕರ್​ ನೀಡುತ್ತಿದೆ.

Mercedes-Benz Landmark Cars congratulates Bollywood Star Mr. Arjun Kapoor for owning the new GLS 600 MAYBACH.We are…

Posted by Mercedes-Benz Landmark Cars Mumbai on Sunday, September 5, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...