ದಾವಣಗೆರೆ: ಕಳೆದ ಎರಡು ತಿಂಗಳಿನಿಂದ ಕುಸಿತವಾಗಿದ್ದ ಅಡಿಕೆ ದರ ಮೂರು ದಿನಗಳಿಂದ ಏರುಗತಿಯಲ್ಲಿ ಸಾಗುತ್ತಿದೆ.
ಸೋಮವಾರ ದಾವಣಗೆರೆ ಜಿಲ್ಲೆಯ ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ದರ ಕ್ವಿಂಟಲ್ ಗೆ 50,000 ರೂ. ಗಡಿ ದಾಟಿದ್ದು, ಕ್ವಿಂಟಾಲ್ ಗೆ 6-7 ಸಾವಿರ ರೂ.ವರೆಗೆ ಹೆಚ್ಚಳವಾಗಿದೆ.
ಹತ್ತು ವರ್ಷಗಳ ಹಿಂದೆ ಒಂದು ಕ್ವಿಂಟಾಲ್ ಅಡಿಕೆ ದರ 80,000 ರೂ.ವರೆಗೆ ಏರಿಕೆ ಕಂಡಿತ್ತು. ಚನ್ನಗಿರಿ ತುಮ್ಕೋಸ್ ಮಾರುಕಟ್ಟೆಯಲ್ಲಿ ಸೋಮವಾರ ಪ್ರತಿ ಕ್ವಿಂಟಾಲ್ ಅಡಿಕೆ ದರ ಗರಿಷ್ಠ 50,539 ರೂ.ಗೆ ಮಾರಾಟವಾಗಿದೆ. ಸುಗ್ಗಿ ಶುರುವಾದ ನಂತರ 43 -44 ಸಾವಿರ ರೂ. ಗೆ ಇಳಿದಿದ್ದ ದರ ಈಗ ಮತ್ತೆ ಏರುಗತಿಯಲ್ಲಿ ಸಾಗಿದೆ. ಈ ದರ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಡಿಕೆ ಬೆಲೆ ಏರುಗತಿಯಲ್ಲಿ ಸಾಗುತ್ತಿರುವುದು ಬೆಳೆಗಾರರಲ್ಲಿ ಸಂತಸ ತಂದಿದೆ. ಈಗ ಹೆಚ್ಚಳವಾಗುತ್ತಿರುವ ದರ ಹೊಸ ಅಡಿಕೆ ಬರುವವರೆಗೂ ಮುಂದುವರೆಯಲಿದೆ. ಮೂರ್ನಾಲ್ಕು ವರ್ಷಗಳಿಂದ ಅಡಿಕೆ ದರದಲ್ಲಿ ಸ್ಥಿರತೆ ಇದೆ.