alex Certify ʼಮಧುಮೇಹಿʼ ಗಳು ಮೊಟ್ಟೆ ಸೇವನೆ ಮಾಡಬಹುದೇ..? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಮಧುಮೇಹಿʼ ಗಳು ಮೊಟ್ಟೆ ಸೇವನೆ ಮಾಡಬಹುದೇ..? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ

ಮೊಟ್ಟೆ ಒಂದು ರೀತಿಯ ಪರಿಪೂರ್ಣವಾದ ಆಹಾರ ಅಂತಾ ಹೇಳಿದ್ರೆ ತಪ್ಪಾಗೋದಿಲ್ಲ. ಮೊಟ್ಟೆಯಲ್ಲಿ ಕೊಲೀನ್​ ಹಾಗೂ ಲ್ಯುಟೀನ್​ ಸೇರಿದಂತೆ ಅನೇಕ ಮಾದರಿಯ ಪೋಷಕಾಂಶಗಳು ಇರುತ್ತದೆ. ಇದು ನಮ್ಮನ್ನು ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ.

ದೇಹದ ಆರೋಗ್ಯ ಚೆನ್ನಾಗಿದ್ದರೆ ಮನಸ್ಸಿನ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ. ಮೊಟ್ಟೆಯಲ್ಲಿರುವ ಹಳದಿ ಭಾಗವು ಬಯೋಟಿನ್​ ಅಂಶವನ್ನು ಹೊಂದಿರುತ್ತದೆ. ಇದು ಚರ್ಮ, ಕೂದಲು ಹಾಗೂ ಉಗುರುಗಳ ಆರೋಗ್ಯವನ್ನು ಕಾಪಾಡೋದ್ರ ಜೊತೆಯಲ್ಲಿ ದೇಹದಲ್ಲಿ ಇನ್ಸುಲಿನ್​ ಉತ್ಪಾದನೆ ಕೂಡ ಮಾಡುತ್ತದೆ. ಮೊಟ್ಟೆಯಲ್ಲಿ ಒಮೆಗಾ 3 ಸಮೃದ್ಧವಾಗಿದೆ. ಇದು ಮಧುಮೇಹಿಗಳಿಗೆ ಅತ್ಯಂತ ಅವಶ್ಯವಾಗಿ ಬೇಕಾದ ಕೊಬ್ಬಿನಂಶವಾಗಿದೆ.

ಅನೇಕರು ಮೊಟ್ಟೆ ಸೇವನೆಯು ಹೃದ್ರೋಗಿಗಳಿಗೆ ಹಾಗೂ ಮಧುಮೇಹಿಗಳಿಗೆ ಒಳ್ಳೆಯದಲ್ಲ ಅಂತಾ ಹೇಳುತ್ತಾರೆ. ಇದರಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಕೊಬ್ಬಿನಂಶ ಇರೋದ್ರಿಂದ ಈ ಕಾಯಿಲೆ ಇರುವವರಿಗೆ ಮೊಟ್ಟೆ ತಿನ್ನುವುದು ಒಳ್ಳೆಯದಲ್ಲ ಅಂತಾರೆ. ಆದರೆ ಮೊಟ್ಟೆಯು ಎಂದಿಗೂ ರಕ್ತದಲ್ಲಿರುವ ಕೊಲೆಸ್ಟ್ರಾಲ್​ ಪ್ರಮಾಣವನ್ನ ಏರಿಕೆ ಮಾಡೋದಿಲ್ಲ. ಮೊಟ್ಟೆಯಲ್ಲಿ ಒಳ್ಳೆಯ ಕೊಬ್ಬು ಇದ್ದು, ಅರೋಗ್ಯಕ್ಕೆ ಒಳ್ಳೆಯದು. ಹೃದ್ರೋಗಿಗಳು ತಮ್ಮ ವೈದ್ಯರ ಸಲಹೆಯನ್ನು ಪಡೆದು ಮೊಟ್ಟೆ ಸೇವನೆ ಮಾಡುವುದು ಒಳ್ಳೆಯದು.

ಮಧುಮೇಹಿಗಳಿಗೆ ಮೊಟ್ಟೆ ಸೇವನೆಯಿಂದ ಆಗುವ ಪ್ರಯೋಜನಗಳು:

ಮಧುಮೇಹಿಗಳು ನಿಯಂತ್ರಿತ ಪ್ರಮಾಣದಲ್ಲಿ ಮೊಟ್ಟೆ ಸೇವನೆ ಮಾಡಿದರೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಮೊಟ್ಟೆಯಲ್ಲಿ ಗ್ಲೈಸಮಿಕ್​ ಅಂಶ ಕಡಿಮೆ ಇರೋದ್ರಿಂದ ಇದನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ.

ಮೊಟ್ಟೆಯಲ್ಲಿರುವ ವಿಟಾಮಿನ್​ ಎ, ಬಿ 6 , ಬಿ 12 ಹಾಗೂ ಸೆಲೆನಿಯಂ ನಂತಹ ಜೀವಸತ್ವಗಳು ಮಧುಮೇಹಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.

ಮೊಟ್ಟೆಯಲ್ಲಿರುವ ಲ್ಯೂಟಿನ್​ ಹಾಗೂ ಜಿಯಾಕ್ಸಾಂಥಿನ್​ ಎಂಬ ಪೋಷಕಾಂಶಗಳು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ಮಧುಮೇಹಿಗಳು ಸುಸ್ತು ಉಂಟಾಗುವುದು ಬೇಗ. ಹೀಗಾಗಿ ಮೊಟ್ಟೆ ಸೇವನೆ ಮಾಡಿದರೆ ಅವರಿಗೆ ಬೇಗನೆ ಸುಸ್ತಾಗುವುದಿಲ್ಲ. ಮೊಟ್ಟೆಗಳಲ್ಲಿ ಇರುವ ಪ್ರೋಟೀನ್​, ಥಯಾಮಿನ್​ , ರೈಬೋಫ್ಲಾನಿನ್​, ಫೋಲೇಟ್​ ಹಾಗೂ ವಿಟಾಮಿನ್​ ಬಿ 16, ಬಿ 12 ಅಂಶಗಳು ಮಧುಮೇಹಿಗಳಿಗೆ ಅಗತ್ಯ ಶಕ್ತಿಯನ್ನು ನೀಡುತ್ತದೆ.

(ಇದು ವಿವಿಧ ಮೂಲಗಳ ಆಧಾರದಿಂದ ಬರೆದ ಲೇಖನವಾಗಿದ್ದು, ಅಂತಿಮವಾಗಿ ತಜ್ಞರ ಸಲಹೆ ಪಡೆದು ಅದನ್ನು ಅನುಸರಿಸುವುದು ಸೂಕ್ತ)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...