ಮೊಟ್ಟೆ ಒಂದು ರೀತಿಯ ಪರಿಪೂರ್ಣವಾದ ಆಹಾರ ಅಂತಾ ಹೇಳಿದ್ರೆ ತಪ್ಪಾಗೋದಿಲ್ಲ. ಮೊಟ್ಟೆಯಲ್ಲಿ ಕೊಲೀನ್ ಹಾಗೂ ಲ್ಯುಟೀನ್ ಸೇರಿದಂತೆ ಅನೇಕ ಮಾದರಿಯ ಪೋಷಕಾಂಶಗಳು ಇರುತ್ತದೆ. ಇದು ನಮ್ಮನ್ನು ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ.
ದೇಹದ ಆರೋಗ್ಯ ಚೆನ್ನಾಗಿದ್ದರೆ ಮನಸ್ಸಿನ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ. ಮೊಟ್ಟೆಯಲ್ಲಿರುವ ಹಳದಿ ಭಾಗವು ಬಯೋಟಿನ್ ಅಂಶವನ್ನು ಹೊಂದಿರುತ್ತದೆ. ಇದು ಚರ್ಮ, ಕೂದಲು ಹಾಗೂ ಉಗುರುಗಳ ಆರೋಗ್ಯವನ್ನು ಕಾಪಾಡೋದ್ರ ಜೊತೆಯಲ್ಲಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಕೂಡ ಮಾಡುತ್ತದೆ. ಮೊಟ್ಟೆಯಲ್ಲಿ ಒಮೆಗಾ 3 ಸಮೃದ್ಧವಾಗಿದೆ. ಇದು ಮಧುಮೇಹಿಗಳಿಗೆ ಅತ್ಯಂತ ಅವಶ್ಯವಾಗಿ ಬೇಕಾದ ಕೊಬ್ಬಿನಂಶವಾಗಿದೆ.
ಅನೇಕರು ಮೊಟ್ಟೆ ಸೇವನೆಯು ಹೃದ್ರೋಗಿಗಳಿಗೆ ಹಾಗೂ ಮಧುಮೇಹಿಗಳಿಗೆ ಒಳ್ಳೆಯದಲ್ಲ ಅಂತಾ ಹೇಳುತ್ತಾರೆ. ಇದರಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಕೊಬ್ಬಿನಂಶ ಇರೋದ್ರಿಂದ ಈ ಕಾಯಿಲೆ ಇರುವವರಿಗೆ ಮೊಟ್ಟೆ ತಿನ್ನುವುದು ಒಳ್ಳೆಯದಲ್ಲ ಅಂತಾರೆ. ಆದರೆ ಮೊಟ್ಟೆಯು ಎಂದಿಗೂ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನ ಏರಿಕೆ ಮಾಡೋದಿಲ್ಲ. ಮೊಟ್ಟೆಯಲ್ಲಿ ಒಳ್ಳೆಯ ಕೊಬ್ಬು ಇದ್ದು, ಅರೋಗ್ಯಕ್ಕೆ ಒಳ್ಳೆಯದು. ಹೃದ್ರೋಗಿಗಳು ತಮ್ಮ ವೈದ್ಯರ ಸಲಹೆಯನ್ನು ಪಡೆದು ಮೊಟ್ಟೆ ಸೇವನೆ ಮಾಡುವುದು ಒಳ್ಳೆಯದು.
ಮಧುಮೇಹಿಗಳಿಗೆ ಮೊಟ್ಟೆ ಸೇವನೆಯಿಂದ ಆಗುವ ಪ್ರಯೋಜನಗಳು:
ಮಧುಮೇಹಿಗಳು ನಿಯಂತ್ರಿತ ಪ್ರಮಾಣದಲ್ಲಿ ಮೊಟ್ಟೆ ಸೇವನೆ ಮಾಡಿದರೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಮೊಟ್ಟೆಯಲ್ಲಿ ಗ್ಲೈಸಮಿಕ್ ಅಂಶ ಕಡಿಮೆ ಇರೋದ್ರಿಂದ ಇದನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ.
ಮೊಟ್ಟೆಯಲ್ಲಿರುವ ವಿಟಾಮಿನ್ ಎ, ಬಿ 6 , ಬಿ 12 ಹಾಗೂ ಸೆಲೆನಿಯಂ ನಂತಹ ಜೀವಸತ್ವಗಳು ಮಧುಮೇಹಿಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ.
ಮೊಟ್ಟೆಯಲ್ಲಿರುವ ಲ್ಯೂಟಿನ್ ಹಾಗೂ ಜಿಯಾಕ್ಸಾಂಥಿನ್ ಎಂಬ ಪೋಷಕಾಂಶಗಳು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
ಮಧುಮೇಹಿಗಳು ಸುಸ್ತು ಉಂಟಾಗುವುದು ಬೇಗ. ಹೀಗಾಗಿ ಮೊಟ್ಟೆ ಸೇವನೆ ಮಾಡಿದರೆ ಅವರಿಗೆ ಬೇಗನೆ ಸುಸ್ತಾಗುವುದಿಲ್ಲ. ಮೊಟ್ಟೆಗಳಲ್ಲಿ ಇರುವ ಪ್ರೋಟೀನ್, ಥಯಾಮಿನ್ , ರೈಬೋಫ್ಲಾನಿನ್, ಫೋಲೇಟ್ ಹಾಗೂ ವಿಟಾಮಿನ್ ಬಿ 16, ಬಿ 12 ಅಂಶಗಳು ಮಧುಮೇಹಿಗಳಿಗೆ ಅಗತ್ಯ ಶಕ್ತಿಯನ್ನು ನೀಡುತ್ತದೆ.
(ಇದು ವಿವಿಧ ಮೂಲಗಳ ಆಧಾರದಿಂದ ಬರೆದ ಲೇಖನವಾಗಿದ್ದು, ಅಂತಿಮವಾಗಿ ತಜ್ಞರ ಸಲಹೆ ಪಡೆದು ಅದನ್ನು ಅನುಸರಿಸುವುದು ಸೂಕ್ತ)