ಭಾರತದ ಸ್ಟಾರ್ ಆರ್ಚರಿ ಆಟಗಾರ್ತಿ ದೀಪಿಕಾ ಕುಮಾರಿ ಒಂದೇ ದಿನ ಮೂರು ಚಿನ್ನದ ಪದಕಗಳನ್ನ ಗಳಿಸುವ ಮೂಲಕ ಗ್ಲೋಬಲ್ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ರಾಂಚಿಯ 27 ವರ್ಷದ ಈ ಆಟಗಾರ್ತಿ 2012ರಿಂದ ಇದೇ ಮೊದಲ ಬಾರಿ ಗ್ಲೋಬಲ್ ರ್ಯಾಂಕಿಂಗ್ ಮೊದಲ ಸ್ಥಾನ ಪಡೆದಿದ್ದಾರೆ. ಮಹಿಳೆಯರ ವೈಯಕ್ತಿಕ ಸ್ಪರ್ಧೆ, ಮಹಿಳಾ ತಂಡ ಹಾಗೂ ಮಿಶ್ರ ಫೈನಲ್ಗಳಲ್ಲಿ ಗೆದ್ದು ಬೀಗಿದ ದೀಪಿಕಾ ಮೂರು ಚಿನ್ನದ ಪದಕಗಳನ್ನ ತಮ್ಮದಾಗಿಸಿಕೊಂಡಿದ್ದಾರೆ.
ದೀಪಿಕಾರ ಈ ಸಾಧನೆಯಿಂದಾಗಿಯೇ ಅವರು ಸೋಮವಾರ ಗ್ಲೋಬಲ್ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನ ಪಡೆಯುವಂತಾಗಿದೆ ಎಂದು ವಿಶ್ವ ಅರ್ಚರಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.
ಮಹಿಳೆಯ ವೈಯಕ್ತಿಕ ಸ್ಪರ್ಧೆಯಲ್ಲಿ ರಷ್ಯಾದ ಎಲೆನಾ ಒಸಿಪೋವಾ ವಿರುದ್ಧ 6-0 ಅಂತರದಲ್ಲಿ ಜಯ ಸಾಧಿಸಿದ್ದರು. ಅಲ್ಲದೇ ಮಿಶ್ರ ಫೈನಲ್ನಲ್ಲಿ ಪತಿ ಅಟಾನು ದಾಸ್ ಜೊತೆ ಸೇರಿ ನೆದರ್ಲೆಂಡ್ ತಂಡವನ್ನ 5-3 ಅಂತರದಲ್ಲಿ ಮಣಿಸಿತ್ತು. ಇನ್ನು ಮಹಿಳಾ ಗುಂಪು ಸ್ಪರ್ಧೆಯಲ್ಲಿ ಕೋಮಲಿಕಾ ಬ್ಯಾರಿ ಜೊತೆ ಸೇರಿ ಮೆಕ್ಸಿಕೋ ವಿರುದ್ಧ ಗೆಲುವಿನ ನಗೆ ಬೀರಿದ್ದರು.